ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣ ಮೈಗೂಡಿಸಿಕೊಳ್ಳಿ ; ಶಿಕ್ಷಕಿ ಅಂಬಿಕಾ ಎಲ್.ಯು.

Written by malnadtimes.com

Published on:

ರಿಪ್ಪನ್‌ಪೇಟೆ ; ಇಂದಿನ ಯುವ ಜನಾಂಗ ವಿಧ್ಯಾರ್ಥಿ ದಸೆಯಲ್ಲಿಯೇ ನಾಯಕತ್ವದ ಗುಣ ಬೆಳಸಿಕೊಳ್ಳಲು ಇಂತಹ ಶಿಬಿರಗಳು ಅಗತ್ಯವಾಗಿವೆ ಎಂದು ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅಂಬಿಕಾ ಎಲ್‌.ಯು. ಹೇಳಿದರು.

WhatsApp Group Join Now
Telegram Group Join Now
Instagram Group Join Now

ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ 2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಶಿಬಿರದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಸನ್ನಡತೆ ವಿದ್ಯಾರ್ಥಿಗಳಿಗೆ ಭೂಷಣ. ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವನೆ ದೂರವಾಗುತ್ತಿದೆ.

ವಿದ್ಯಾರ್ಥಿಗಳು ವ್ಯಾಸಂಗದೊಂದಿಗೆ ಗ್ರಾಮೀಣ ಬದುಕಿನ ಬಗ್ಗೆ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಪೂರಕವಾಗಲಿದೆ. ಸರ್ಕಾರಿ ಶಾಲೆಗೆ ಗ್ರಾಮೀಣ ಪ್ರದೇಶದಲ್ಲಿ ಪೋಷಕರು ತಮ್ಮ ಮಕ್ಕಳಯನ್ನು ದಾಖಲಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ವ್ಯಾಮೋಹದಿಂದಾಗಿ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆಗೆ ಹೆಚ್ಚು ಆಸಕ್ತಿ ವಹಿಸುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕ ವೃಂದ ಮತ್ತು ಪೋಷಕ ವರ್ಗ ಶ್ರಮಿಸುವಂತಾಗಬೇಕು ಎಂದು ಹೇಳಿದ ಅವರು, ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್ ಎನ್.ಎಸ್.ಎಸ್. ಶಿಬಿರಾರ್ಥಿಗಳು ನಿತ್ಯ ಬದುಕಿನಲ್ಲಿ ಕರಕುಶಲತೆಯ ವಿಷಯವನ್ನಿಟ್ಟುಕೊಂಡು ಶಿಬಿರದ ಸ್ವಯಂ ಸೇವಕರಿಗೆ ವಿವಿಧ ಚಟುವಟಿಕೆ ನಡೆಸಿ ಪೇಪರ್ ಆರ್ಟ್, ಸ್ಟೋನ್ ಆರ್ಟ್, ಎನ್ವಲಪ್ ತಯಾರಿಕೆ ಹೀಗೆ ಅನೇಕ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗ್ರಾಮೀಣ ಪ್ರದೇಶದ ಶಾಲೆಯಾದ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ-ಬಣ್ಣವನ್ನು ಮಾಡುವುದರೊಂದಿಗೆ ಶಾಲೆಯ ಸುತ್ತಮುತ್ತ ಸ್ವಚ್ಚತೆ ಪರಿಸರದ ರಕ್ಷಣೆಯ ಕಾಯಕದಲ್ಲಿ ಮಗ್ನರಾಗಿದ್ದು ವಿಶೇಷವಾಗಿ ಸಾರ್ವಜನಿಕರ ಪ್ರಶಂಸೆಯೊಂದಿಗೆ ಗಮನಸೆಳೆದರು.

ಕಡಸೂರು ಗ್ರಾಮದ ಹಿರಿಯರಾದ ನಾಗಭೂಷಣರಾವ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಎಸ್.ಡಿ.ಎಂ.ಸಿ. ಸದಸ್ಯರಾದ ಹರಿಶ್ಚಂದ್ರ, ಹೂವಪ್ಪ, ಯಶೋಧ, ಕೊಡಚಾದ್ರಿ ಕಾಲೇಜ್ ಪ್ರಾಧ್ಯಾಪಕರಾದ ಡಾ.ಎಂ.ಟಿ. ಬಸವರಾಜಪ್ಪ, ಡಿ.ಮಂಜುನಾಥ, ಡಾ.ಹೆಚ್.ಮಂಜುನಾಥ, ಹಿರಿಯ ಶ್ರೇಣಿ ಗ್ರಂಥಪಾಲಕ ಡಾ.ಲೋಕೇಶಪ್ಪ ಹೆಚ್. ಕೆ.ಎಸ್.ಮೇದಿನಿ, ಡಾ.ಕೆ. ಶ್ರೀಪತಿ ಹಳಗುಂದ, ಡಾ.ಮಧುನಾಯ್ಕ್, ಜಿ.ಜಿ., ಸಮಟಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಸ್.ರತ್ನಕುಮಾರಿ, ಕಡಸೂರು ನಿವೃತ್ತ ಉಪನ್ಯಾಸಕ ಕೆ.ಎಸ್.ಶ್ರೀಧರ ಮೂರ್ತಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Leave a Comment