ರಿಪ್ಪನ್‌ಪೇಟೆ ; ಗರ್ತಿಕೆರೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಅಷ್ಟಬಂಧ ಕಲಶೋತ್ಸವ ಕಾರ್ಯಕ್ರಮವೂ ಭೀಮನಕಟ್ಟೆ ಭೀಮಸೇತು ಮುನಿವೃಂದ ಶ್ರೀ ರಘವರೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯಸಾನಿಧ್ಯದಲ್ಲಿ ಜರುಗಿತು.

ಇಂದು ಬೆಳಗ್ಗೆ 9.00 ಗಂಟೆಯಿಂದ 108 ಮೋದಕ ಗಣಹೋಮ ರಾಮತಾರಕ ಹೋಮ ಅಂಜನೇಯ ಮೂಲಮಂತ್ರ ಹೋಮ, ಪವಮಾನ ಅಭಿಷೇಕ, ಶ್ರೀಸತ್ಯನಾರಾಯಣ ವ್ರತ ಮಹಾಪೂಜೆ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.
ಸಂಜೆ 6 ಗಂಟೆಯಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹ, ಪಂಚಗವ್ಯ, ಅರಣಿ ಮಥನ, ಸಪ್ತ ಶುದ್ದಿ ಪ್ರಸಾದ ಶುದ್ದಿ ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜೆ, ಪ್ರಕಾರ ಬಲಿ ಜರುಗಿತು.
ಏಪ್ರಿಲ್ 11 ರಂದು ಬೆಳಗ್ಗೆ 9 ಗಂಟೆಯಿಂದ ಪುಣ್ಯಾಹಃ, ಪಂಚಗವ್ಯ, ದೇವನಾಂದಿ, ಬಿಂಬ ಶುದ್ದಿ ಪ್ರಕ್ರಿಯೆ, ಅಷ್ಟಬಂಧ ಲೇಪನ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ವಿರಜಾಮಂತ್ರ ಹೋಮ, ತತ್ವಹೋಮ, ತತ್ವಕಲಶಾಭಿಷೇಕ ಮಹಾಪೂಜೆ ಸಂಜೆ 6 ಗಂಟೆ ರಥ ಶುದ್ದಿ ವಾಸ್ತು ಪೂಜೆ, ಚಕ್ರಾಬ್ದಮಂಡಲಪೂಜೆ, ಕಲಶ ಪ್ರತಿಷ್ಟೆ ನಡೆಯಲಿದೆ.

ಏಪ್ರಿಲ್ 12 ರಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಅಷ್ಟೋತ್ತರ ಕಲಶಪೂರಣ ಪ್ರಧಾನ ಹೋಮ, ಪವಮಾನ ಹೋಮ, ಶ್ರೀಗಳ ದಿವ್ಯಸಾನಿಧ್ಯದಲ್ಲಿ ಅಷ್ಟೋತ್ತರ ಕಲಶ ಸಹಿತ ಶ್ರೀ ದೇವರಿಗೆ ಬ್ರಹ್ಮಕುಂಭಾಭಿಷೇಕ ಶ್ರೀರಾಮದೇವರಿಗೆ ರಜತ ಕವಚ ಸಮರ್ಪಣೆ ಜರುಗಲಿದೆ.

ಮಧ್ಯಾಹ್ನ 3 ಗಂಟೆಗೆ ಭೀಮನಕಟ್ಟೆ ಭೀಮಸೇತು ಮುನಿವೃಂದ ಶ್ರೀ ರಘವರೇಂದ್ರ ತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಮಾರಂಭ ಜರುಗಲಿದೆ.
ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಮತ್ತು ನಿಟ್ಟೂರು ನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮಿಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಮಾರಂಭ ಜರುಗಲಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.