ಭದ್ರಕಾಳಿ, ಸೋಮೇಶ್ವರ ಸನ್ನಿಧಿಯಲ್ಲಿ ವರ್ಧಂತೋತ್ಸವ

Written by malnadtimes.com

Published on:

ಕಳಸ ; ತಾಲೂಕಿನ ಇತಿಹಾಸ ಪ್ರಸಿದ್ಧ ಹೆಮ್ಮಕ್ಕಿಯ ಭದ್ರಕಾಳಿ ಮತ್ತು ಸೋಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವರ್ಧಂತೋತ್ಸವ ವಿಜೃಂಭಣೆಯಿಂದ ನೆರವೇರಿತು.

WhatsApp Group Join Now
Telegram Group Join Now
Instagram Group Join Now

ಏ 22ರಂದು ಶ್ರೀ ಭದ್ರಕಾಳಿ ಅಮ್ಮನವರು ಮತ್ತು ಚೌಡೇಶ್ವರಿ ಸನ್ನಿಧಿಯಲ್ಲಿ ಚಂಡಿಕಾ ಹೋಮ, ವರ್ಧಂತಿ ಪೂಜೆ, ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಮತ್ತು ಅನ್ನ ಸಂತರ್ಪಣೆ ನೆರವೇರಿತು.

ಏ 23ರಂದು ಸೋಮೇಶ್ವರ ಸ್ವಾಮಿ ಮತ್ತು ಭೂತರಾಯನ ಸನ್ನಿಧಿಯಲ್ಲಿ ರುದ್ರಹೋಮ, ಸೋಮೇಶ್ವರ ಸ್ವಾಮಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಮತ್ತು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

2 ದಿನ ಊರಿನ ಮತ್ತು ಪರ ಊರಿನ ನೂರಾರು ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದರು.

Leave a Comment