ಶುದ್ಧ ಮನಸ್ಸಿನಿಂದ ಭಗವಂತನ ನೆನೆದರೆ ನೆಮ್ಮದಿ ಬದುಕು ಸಾಧ್ಯ ; ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ

Written by malnadtimes.com

Published on:

ರಿಪ್ಪನ್‌ಪೇಟೆ ; ಶುದ್ಧ ಮನಸ್ಸಿನಿಂದ ಭಗವಂತನ ನೆನೆದರೆ ನೆಮ್ಮದಿಯ ಬದುಕು ಸಾಧ್ಯವೆಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಮಸರೂರು ಪೂಜಾರಗೊಪ್ಪ ಶ್ರೀ ವೀರಭದ್ರೇಶ್ವರಸ್ವಾಮಿ ಸೇವಾ ಸಮಿತಿಯವರು ಆಯೋಜಿಸಲಾದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭೀಷೇಕ ಮತ್ತು ಅರ್ಚನೆ ಧಾರ್ಮಿಕ ಧರ್ಮಸಭೆಯ ದಿವ್ಯನಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಈ ಜಗತ್ತು ಭಗವಂತನ ಕೊಡುಗೆ ಹಾಗಾಗಿ ಸರ್ವರೂ ಸ್ನೇಹ ಭಾವನೆಯಿಂದ ಜೀವನವನ್ನು ಸಾಗಿಸುವುದು ಅತ್ಯಂತ ಅಗತ್ಯವಾಗಿದೆ. ನಾನು ನನ್ನದು ಎಂಬ ಭಾವನೆ ತೊರೆದಾಗ ಮಾತ್ರ ನೆಮ್ಮದಿ ದೊರೆಯಲು ಸಾಧ್ಯವೆಂದರು.

ಡಾ.ಗಣೇಶ್ ಆರ್.ಕೆಂಚನಾಲ ಪ್ರಾಸ್ತಾವಿಕ ಮಾತನಾಡಿದರು. ಧರ್ಮಸಭೆಯ ಅಧ್ಯಕ್ಷತೆಯನ್ನು ಶ್ರೀವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಕಗ್ಗಲಿ ಪುಟ್ಟಸ್ವಾಮಿಗೌಡ ವಹಿಸಿದ್ದರು.


ದೇವಸ್ಥಾನದ ಪ್ರಧಾನ ಅರ್ಚಕ ರಾಚಪ್ಪಗೌಡ, ಕಾರ್ಯದರ್ಶಿ ಹೆಚ್.ಬಿ.ಜಗದೀಶ್‌ಗೌಡ ಹಾರಂಬಳ್ಳಿ, ಮಸರೂರು ಎಂ.ಬಿ.ಗಣೇಶಗೌಡ, ಎಂ.ಆರ್.ಮುರುಗೇಶಗೌಡ, ಎಸ್.ವೀರೇಶ್ ಇನ್ನಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ವಿರಕ್ತಮಠದ ಮಹೇಶಮೂರ್ತಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು.

ಮಹೇಶಮೂರ್ತಿ ಸಂಗಡಿಗರಿಂದ ವೇದಘೋಷ, ಕಗ್ಗಲಿ ಶಿವಪ್ರಕಾಶ ಪಾಟೀಲ್ ಸ್ವಾಗತಿಸಿದರು. ವೀರೇಶ್ ಎಸ್. ನಿರೂಪಿಸಿದರು, ವಂದಿಸಿದರು. ನಂತರ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

Leave a Comment