ಹೊಸನಗರ

ಹೊಸನಗರದಲ್ಲಿ ಡಾ|| ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

ಹೊಸನಗರ ; ಭಾರತದ ಸಂವಿಧಾನದ ಪಿತಾಮಹ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ ತಜ್ಞ, ನ್ಯಾಯ ಶಾಸ್ತ್ರಜ್ಞ, ಸಾಮಾಜಿಕ ಸುಧಾರಕ, ಅರ್ಥಶಾಸ್ತ್ರಜ್ಞ ಮತ್ತು ಭಾರತದ ಶ್ರೇಷ್ಠ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು ಎಂದು ಹೊಸನಗರ ತಹಸೀಲ್ದಾರ್ ಭರತ್‌ರಾಜ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ತಾಲ್ಲೂಕು ಪಂಚಾಯಿತಿಯ ಆವರಣದಲ್ಲಿ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯಿತಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ದಲಿತ ಮುಖಂಡರು ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ ಆರ್ ಅಂಬೇಡ್ಕರ್ ರವರ 135ನೇ ಜಯಂತಿ ಹಾಗೂ ಹಸಿರು ಕ್ರಾಂತಿ ಹರಿಕಾರ ಭಾರತದ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನ್ ರಾಮ್ ರವರ 119ನೇ ಜನ್ಮದಿನಾಚರಣೆಯ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಬಾವಚಿತ್ರವನ್ನು ಹೊಸನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಿರುವುದು.

ಡಾ|| ಬಿ ಆರ್ ಅಂಬೇಡ್ಕರ್‌ರವರು ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಡಾ|| ಬಿ ಆರ್ ಅಂಬೇಡ್ಕರ್ ರವರಿಗೆ ಸರಿ ಸಾಟಿಯಿಲ್ಲದ ದೈರ್ಯ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಗಳು ದೈವದತ್ತವಾಗಿ ಬಂದಿದೆ. ಅವುಗಳನ್ನು ಸಮಾಜ ಸುಧಾರಕರಾಗಿ ನ್ಯಾಯ ಶಾಸ್ತ್ರಜ್ಞರಾಗಿ ಸಮಾಜ ಶಾಸ್ತ್ರದಿಂದ ಮಾನವ ಶಾಸ್ತ್ರದವರೆಗೆ ರಾಜಕೀಯ ಅರ್ಥಶಾಸ್ತ್ರದಿಂದ ಧರ್ಮಶಾಸ್ತ್ರದವರೆಗೆ ಅನೇಕ ವಿಷಯಗಳು ಮತ್ತು ವಿಚಾರಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಅವರು ಕಟ್ಟಾ ಪ್ರಜಾಪ್ರಭುತ್ವ ವಾದಿಯಾಗಿದ್ದು ಸಮಾಜದಲ್ಲಿ ನೈತಿಕಥೆಯ ನೆಲಗಟ್ಟಿಲ್ಲದೆ ಪ್ರಜಾಪಭುತ್ವ ಮತ್ತು ಕಾನೂನಿನ ನಿಯಮ ಇರಲು ಸಾಧ್ಯವಿಲ್ಲವೆಂದು ಅವರು ನಂಬಿದ್ದರು. ಅವರ ಪಾಲಿಗೆ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದಂತೆಯೇ ಪ್ರಜಾಪ್ರಭುತ್ವ ರಾಜಕೀಯ ಮತ್ತು ನೈತಿಕಥೆಗಳ ತ್ರಿಮೂರ್ತಿಗಳಾಗಿದ್ದವು ಎಂದು ಹೇಳಿದರು.

ಚಾದರ್ ಕೆರೆ ನೀರಿಗಾಗಿ ಹೋರಾಟ ನಡೆಸಿದ ಡಾ|| ಬಿ.ಆರ್. ಅಂಬೇಡ್ಕರ್ ಡಾ. ಪ್ರದೀಪ್ ಎನ್.ವಿ. ಬ್ರಿಟಿಷರು ಉಪ್ಪಿನ ಮೇಲೆ ಶುಲ್ಕ ಹಾಕಿದ್ದಾರೆ ಎಂಬ ಕಾರಣದಿಂದ ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ನಡೆಸಿದರು. ಆದರೇ ಭಾರತ ದೇಶದಲ್ಲಿ ಹುಟ್ಟಿ ಬೆಳೆದ ಡಾ|| ಬಿ ಅಂಬೇಡ್ಕರ್‌ರವರಿಗೆ ನಮ್ಮ ದೇಶದಲ್ಲಿಯೇ ಇದ್ದ ಕರೆಯ ನೀರು ಮುಟ್ಟಬೇಡಿ ಎಂಬುದಕ್ಕೆ ಚಾದರ್ ಕರೆ ಹೋರಾಟ ನಡೆಸಿದರು ಎಂದು ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪ್ರದೀಪ್ ಎನ್.ವಿ ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್‌ರವರಿಗೆ ಗೌರವ ನೀಡಬೇಕಾದರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರೆ ಸಾಲದು ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರು ಶಿಕ್ಷಣ ಕಲಿಯಬೇಕು ಅವರು ರೂಢಿಸಿಕೊಂಡು ಬಂದ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕು ಆಗಾ ಮಾತ್ರ ಅವರಿಗೆ ಗೌರವ ಸಮಾರ್ಪಣೆ ಸಲ್ಲಿಸಿದಂತಾಗುತ್ತದೆ. ಅವರು ಸಂವಿಧಾನ ಬರೆಯುವ ಸಂದರ್ಭದಲ್ಲಿ ಒಂದು ಮಾತನಾಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು.

ರಾಜರಿಂದ ಈ ಭಾರತ ದೇಶವನ್ನಾಳುವುದಲ್ಲ. ಒಂದು ತೋರು ಬೆರಳಿನಿಂದ ದೇಶವನ್ನು ಅಳಿಸುತ್ತೇವೆಂದು ಹೇಳಿದರು. ಅವರು ಬರೆದ ಸಂವಿಧಾನ ಇಂದು ತೋರು ಬೆರಳಿನಿಂದ ದೇಶವನ್ನಾಳುವಂತೆ ಮಾಡಿದೆ. ಆದರೆ ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗದೇ ಅಂಬೇಡ್ಕರ್ ಬರೆದ ಸಂವಿಧಾನ ಕಾನೂನಿನ ಚೌಕಟ್ಟಿನಲ್ಲಿ ಬದುಕಿರಿ ಎಂದರು.

ಈ ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್ ಎಂ.ಎನ್, ತಾಲ್ಲೂಕು ಪಂಚಾಯತಿಯ ಪವನ್‌ಕುಮಾರ್, ವಿನಯ್ ಹೆಗಡೆ ಕರ್ಕಿ, ಕರಿಬಸಪ್ಪ, ಸಬ್‌ ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಿದಂಬರ ಪಿ, ರಾಘವೇಂದ್ರ, ಸರೋಜಮ್ಮ, ಎಸ್ ಹೆಚ್ ನಿಂಗಮೂರ್ತಿ, ಸವಿತಾ, ಮ್ಯಾನೆಂಜರ್ ನಂದಿನಿ, ಸುನೀಲ್, ಸವಿತಾ, ದಲಿತ ಸಂಘರ್ಷ ಸಮತಿಯ ಅಧ್ಯಕ್ಷ ಅರಳಿಸುರಳಿ ನಾಗರಾಜ್, ಮಾವಿನಕೊಪ್ಪ ಮಂಜುನಾಥ್, ಗಂಗನಕೊಪ್ಪ ಹರೀಶ್, ಕರಿನಗೊಳ್ಳಿ ಪ್ರಕಾಶ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]