ಹೊಸನಗರ

InShot 20260914 185142748
ಹೊಸನಗರ

₹7 ಕೋಟಿ ಅಭಿವೃದ್ಧಿಯೊಂದಿಗೆ ಕಂಗೊಳಿಸಿದ ರಿಪ್ಪನ್‌ಪೇಟೆ ವೃತ್ತ ; ಹೈಮಾಸ್ಟ್ ದೀಪ ಉದ್ಘಾಟಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ: ಇಲ್ಲಿನ ಪ್ರಮುಖ ಜಂಕ್ಷನ್ ಆದ ಸಾಗರ-ಹೊಸನಗರ-ಶಿವಮೊಗ್ಗ-ತೀರ್ಥಹಳ್ಳಿ ಸಂಪರ್ಕಿಸುವ ನಾಲ್ಕು ರಸ್ತೆಗಳ ವೃತ್ತದಲ್ಲಿ ನೂತನವಾಗಿ ಅಳವಡಿಸಲಾದ ಹೈಮಾಸ್ಟ್ ಹಾಗೂ ಬೀದಿ ದೀಪಗಳನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.

InShot 20260914 173331777
ಹೊಸನಗರ

ರಿಪ್ಪನ್‌ಪೇಟೆಯಲ್ಲಿ ಗಣೇಶನಿಗೆ ಅದ್ಧೂರಿ ಸ್ವಾಗತ

ರಿಪ್ಪನ್‌ಪೇಟೆ : ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇವಾ ಸಮಿತಿ ವತಿಯಿಂದ ಆಚರಿಸಲಾಗುತ್ತಿರುವ 59ನೇ ವರ್ಷದ ಗಣೇಶೋತ್ಸವದ ಅಂಗವಾಗಿ, ಗಣಪತಿ ಮೂರ್ತಿಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

InShot 20260913 210424969
ಹೊಸನಗರ

15 ವರ್ಷಗಳಿಂದ ಪೊಲೀಸರೊಂದಿಗೆ ಸಹೋದರತ್ವದ ಬಂಧ ; ರಾಖಿ ಕಟ್ಟಿ ಬಾಗಿನ ಅರ್ಪಿಸಿದ ಯಶಸ್ವತಿ

ಹಬ್ಬ-ಹರಿದಿನಗಳೆನ್ನದೆ ಸದಾ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಿರತರಾಗುವ ಪೊಲೀಸ್ ಸಿಬ್ಬಂದಿಗೆ ಹುಂಚದ ನಿವಾಸಿ ಯಶಸ್ವತಿ ವೃಷಭರಾಜ್ ಜೈನ್ ಅವರು ರಾಖಿ ಕಟ್ಟಿ ಹಾಗೂ ಮಹಿಳಾ ಪೊಲೀಸರಿಗೆ ಮುತ್ತೈದೆಯ ಸಂಕೇತವಾದ ಬಾಗಿನ ಅರ್ಪಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

InShot 20260913 200422227
ಹೊಸನಗರ

ಹೊಸನಗರ: ಖಾಕಿ ಕವಿ ಖ್ಯಾತಿಯ ಮಂಜುನಾಥ್ ಅವರ 11ನೇ ಕವನ ಸಂಕಲನ ‘ಆಶಾಸುಂದರಿ’ ಲೋಕಾರ್ಪಣೆ

ಹೊಸನಗರ: ಪೊಲೀಸ್ ಇಲಾಖೆಯ ಕರ್ತವ್ಯದ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ, 'ಖಾಕಿ ಕವಿ' ಎಂದೇ ಖ್ಯಾತರಾಗಿರುವ ಹೊಸನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಅವರ 11ನೇ ಕವನ ಸಂಕಲನ 'ಆಶಾಸುಂದರಿ' ಇತ್ತೀಚೆಗೆ ಬಿಡುಗಡೆಯಾಯಿತು.

InShot 20260913 190356595
ಹೊಸನಗರ

ರಿಪ್ಪನ್‌ಪೇಟೆ: 59ನೇ ಗಣೇಶೋತ್ಸವಕ್ಕೆ ಭರದ ಸಿದ್ಧತೆ

ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸೇವಾ ಸಮಿತಿಯ ವತಿಯಿಂದ ಕಳೆದ 59 ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ 'ಹಿಂದೂ ಮಹಾಗಣಪತಿ ಉತ್ಸವ'ವು ಈ ವರ್ಷವೂ ಅದ್ದೂರಿಯಾಗಿ ನಡೆಯಲಿದ್ದು, ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

InShot 20260913 181646947
ಹೊಸನಗರ

ರಿಪ್ಪನ್‌ಪೇಟೆ: ಅದ್ದೂರಿಯಾಗಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮಕ್ಕಳ ಕೃಷ್ಣ ವೇಷ ಸ್ಪರ್ಧೆ

ಸತ್ಯ, ಧರ್ಮ, ಕರ್ತವ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಶ್ರೀಕೃಷ್ಣನ ಜೀವನ ಮತ್ತು ಭಗವದ್ಗೀತೆಯ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಅಭಿಪ್ರಾಯಪಟ್ಟರು.

ಮಾಸ್ತಿಕಟ್ಟೆ ಬಳಿ ಕಾರು ಅಪಘಾತ: ಕಾಡುಪ್ರಾಣಿ ತಪ್ಪಿಸಲು ಯತ್ನಿಸಿದಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ – car accident
Accident

ಮಾಸ್ತಿಕಟ್ಟೆ ಬಳಿ ಕಾರು ಅಪಘಾತ:ಕಾರಿನ ಮೇಲೆಯೇ ಬಿದ್ದ ವಿದ್ಯುತ್ ಕಂಬ; ಮೂವರು ಮಕ್ಕಳು ಸೇರಿ ಐವರು ಪಾರು

ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪ ಕಾಡುಪ್ರಾಣಿಯನ್ನು ತಪ್ಪಿಸಲು ಯತ್ನಿಸಿದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಂಬ ಕಾರಿನ ಮೇಲೆಯೇ ಬಿದ್ದರೂ, ಮೂವರು ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದಾರೆ.

ದೂರು ಕೊಟ್ಟ 24 ಗಂಟೆಯಲ್ಲೇ ಅಧಿಕಾರಿಗಳು ಸ್ಥಳಕ್ಕೆ ; ಗ್ರಾಮಸ್ಥರಿಂದ ಸಚಿವ ಈಶ್ವರ ಖಂಡ್ರೆಗೆ ಅಭಿನಂದನೆ – samatagaru
ಹೊಸನಗರ

ದೂರು ಕೊಟ್ಟ 24 ಗಂಟೆಯಲ್ಲೇ ಅಧಿಕಾರಿಗಳು ಸ್ಥಳಕ್ಕೆ ; ಗ್ರಾಮಸ್ಥರಿಂದ ಸಚಿವ ಈಶ್ವರ ಖಂಡ್ರೆಗೆ ಅಭಿನಂದನೆ

ಹೊಸನಗರ ತಾಲೂಕಿನ ಸಮಟಗಾರು ಮತ್ತು ಕಡಸೂರು ಗ್ರಾಮಗಳಲ್ಲಿ ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದ ಜಲಜೀವನ್ ಮಿಷನ್ ಯೋಜನೆಗೆ ಮರುಚಾಲನೆ ದೊರೆತಿದೆ. ದೂರು ಬಂದ 24 ಗಂಟೆಯೊಳಗೆ ಸ್ಥಳ ಪರಿಶೀಲನೆ ನಡೆಸುವಂತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ ಬಳಿಕ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.

InShot 20260912 174146388
ಹೊಸನಗರ

ಮತದಾರರ ಪಟ್ಟಿ ಪರಿಷ್ಕರಣೆಗೆ ಸರ್ವರ್ ಅಡ್ಡಿ ; ದಿನಗಟ್ಟಲೆ ಕಾಯುತ್ತಿರುವ ಸಾರ್ವಜನಿಕರು

2026ನೇ ಸಾಲಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ, ಆಕ್ಷೇಪಣೆ ಸಲ್ಲಿಕೆ ಹಾಗೂ ದೋಷಗಳ ತಿದ್ದುಪಡಿ ಕಾರ್ಯಕ್ಕೆ ಸರ್ವರ್ ಸಮಸ್ಯೆ ಎದುರಾಗಿದ್ದು, ಜನರು ತಮ್ಮ ಕೆಲಸಗಳನ್ನು ಬಿಟ್ಟು ದಿನಗಟ್ಟಲೆ ಕಚೇರಿಯಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

InShot 20260912 141440044
ಅಪರಾಧ ಸುದ್ದಿ

ರಿಪ್ಪನ್‌ಪೇಟೆ: ಅಕ್ರಮ ಜಿಂಕೆ ಮಾಂಸ ಮಾರಾಟ ಜಾಲ ಬೇಧಿಸಿದ ಅರಣ್ಯ ಪೊಲೀಸ್ ಪಡೆ – ಇಬ್ಬರ ಬಂಧನ

ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ನೆವಟೂರು ಆನೆಕೆರೆ ಸಮೀಪ ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.