ಹೊಸನಗರ

ಕರ್ತವ್ಯನಿರತ ಗೃಹರಕ್ಷಕ ದಳದ ಸಿಬ್ಬಂದಿ ಮೇಲೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಹಲ್ಲೆ ಆರೋಪ ; ಖಂಡನೆ

ಹೊಸನಗರ ; ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಹೋಮ್ ಗಾರ್ಡ್ ಆಗಿ ಸುಮಾರು 15 ವರ್ಷಗಳಿಂದ ಜಿಲ್ಲಾ ಮತ್ತು ರಾಜ್ಯಾದ್ಯಂತ ನಿರಂತರ ಸೇವೆ ಸಲ್ಲಿಸಿರುವ ಹೊಸನಗರ ತಾಲೂಕಿನ ಅತ್ಯಂತ ಹಿಂದುಳಿದ ಆದಿವಾಸಿ ಹಸಲರು (ಎಸ್‌ಟಿ) ಸಮೂದಾಯಕ್ಕೆ ಸೇರಿದ ಮಹೇಶ್ವರಪ್ಪ ಎನ್ (ಮದಕರಿ) ಎಂಬುವವರನ್ನು ಮಾ. 06 ರಂದು ಜಿಲ್ಲಾ ಗೃಹರಕ್ಷಕ ದಳ ಕಮಾಂಡೆಂಟ್ ಚೇತನ್ ಕುಮಾರ್ ಎಂಬುವರು ಮಹೇಶ್ವರಪ್ಪರನ್ನು ಕರ್ತವ್ಯಕ್ಕೆ ಶಿವಮೊಗ್ಗಕ್ಕೆ ಕರೆಸಿಕೊಂಡು ಮಾತಿನ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆ ಮತ್ತು ಕಿವಿಯ ಮೇಲೆ ಸೇರಿ ಬಲವಾಗಿ ಹೊಡೆದಿದ್ದು ‘ನಿನ್ನ ತಾಕತ್ತಿದ್ದರೆ ಏನಾದರೂ ಮಾಡು ಹೋಗು’ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿ ದರ್ಪದಿಂದ ‘ನಿನ್ನನ್ನು ಕೆಲಸದಿಂದ ತೆಗೆಯುವುದೇ ನನ್ನ ಗುರಿ’ ಎಂದು ಹೇಳಿ ಕೆಳಮಟ್ಟದ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಇದನ್ನು ಜಿಲ್ಲಾ ಆದಿವಾಸಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹೊಸನಗರ ತಾಲ್ಲೂಕು ಘಟಕ ಖಂಡಿಸುತ್ತೇವೆಂದು ಜಿಲ್ಲಾಧ್ಯಕ್ಷ ಎಂ.ಸಿ ಮಲ್ಲೇಶಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ, ಅವರು ಬಲವಾಗಿ ಹೊಡೆದಿರುವ ಹೊಡೆತ ಕೆನ್ನೆ ಮತ್ತು ಕಿವಿ ಭಾಗಕ್ಕೆ ಬಿದ್ದಿರುವುದರಿಂದ ದೇಹದಲ್ಲಿ ಬಿಪಿಯು ಏರುಪೇರಾಗಿ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಹೆಚ್ ಎಂ ಆರ್ ಅನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್‌ಗೆ ಕಳಿಸಿದ್ದು ಎರಡು ದಿನದ ನಂತರ ಬಂದಂತಹ ರುದ್ರೇಶ್ ಎಂಬ ಪೊಲೀಸ್ ಆಸ್ಪತ್ರೆಗೆ ದಾಖಲಾದ ಮಹೇಶ್ವರಪ್ಪರ ಹೇಳಿಕೆ ಪಡೆದುಕೊಂಡು ಹೋಗಿರುತ್ತಾರೆ. ಆ ನಂತರದಲ್ಲಿ ಅವರ ಮೇಲಾಧಿಕಾರಿ ಡಿವೈಎಸ್‌ಪಿರಿಗೆ ಕೊಟ್ಟು ಪೊಲೀಸ್ ರುದ್ರೇಶ್ ಜಿಲ್ಲಾಧ್ಯಕ್ಷ ಮಲ್ಲೇಶಪ್ಪನವರಿಗೆ ಫೋನ್ ಕಾಲ್ ಮಾಡಿ ಡಿವೈಎಸ್‌ಪಿ ಹತ್ತಿರ ಮಾತನಾಡಲು ಹೇಳಿರುತ್ತಾರೆ. ನಾನು ಡಿವೈಎಸ್‌ಪಿ ಹತ್ತಿರ ಮಾತನಾಡಿದಾಗ ಈ ವಿಷಯ ಕೇಸ್ ಮಾಡಲು ಬರುವುದಿಲ್ಲ. ಮೇಲಾಧಿಕಾರಿಗಳ ಮೇಲೆ ಕೇಸ್ ಮಾಡಬೇಕಾದರೆ ಸಿಸಿ ಕ್ಯಾಮೆರಾದ ಫೂಟೇಜ್ ಬೇಕು. ಇಲ್ಲಾ ಸರ್ಕಾರಿ ನೌಕರಿ ಇರುವವರ ಸಾಕ್ಷಿ ಬೇಕು ಎಂದು ತಿಳಿಸಿರುತ್ತಾರೆ. ನಾನು ಏನೇ ಕೇಳಿದರೂ ಎಫ್‌ಐಆರ್ ಮಾಡಲು ಒಪ್ಪಲಿಲ್ಲ. ದಯವಿಟ್ಟು ನಾನು ಎಸ್‌ಟಿ ಸಮೂದಾಯದ ಪರವಾಗಿ ಹೇಳುವುದಾದರೆ ಜಾತಿ ನಿಂದನೆ ಮಾಡಿ, ದೈಹಿಕ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿ , ದುರ್ವರ್ತನೆ ಮಾಡಿದ ಗೃಹರಕ್ಷಕ ದಳದ ಕಮಾಂಡೆಂಟ್ ಚೇತನ್ ಕುಮಾರ್ ಮೇಲೆ ಜಾತಿ ನಿಂದನೆ ಕೇಸ್ ಮಾಡಿ ಕೆಲಸದಿಂದ ತೆಗೆದುಹಾಕಿ ದಲಿತ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸಬೇಕು. ಇಲ್ಲವಾದರೇ ಹೋರಾಟ ಅನಿವಾರ್ಯ ಎಂದರು.

ಪತ್ರಿಕಾಘೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಹೆಚ್.ಜಿ. ಶಿವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವೇಶ್ ಹೆಚ್.ಎನ್. ದೇವಪ್ಪ ಮಳೂರು ತಾಲ್ಲೂಕು ಅಧ್ಯಕ್ಷ ಯೋಗೇಂದ್ರಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!