ಹೊಸನಗರ : ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 85 ರಷ್ಟು ಪೂರ್ಣಗೊಂಡಿದೆ. ಅದೇ ರೀತಿಯಲ್ಲಿಯೂ ಹೊಸನಗರ ತಾಲ್ಲೂಕಿನಲ್ಲಿ 85% ಕ್ಕಿಂತಲ್ಲೂ ಹೆಚ್ಚು ಸಮೀಕ್ಷೆ ಪೂರ್ಣಗೊಂಡಿದ್ದು ಇನ್ನುಳಿದ ಮನೆಗಳಿಗೆ ಸಮೀಕ್ಷೆಗೆ ಗಣತಿದಾರರು ಬಾರದಿದ್ದಲ್ಲಿ ಹೊಸನಗರ ತಾಲ್ಲೂಕು ಕಛೇರಿಯ ದೂರವಾಣಿ ಸಂಖ್ಯೆ 9741621135 ಸಂಪರ್ಕಿಸಿದ್ದಲ್ಲಿ ತಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆಯನ್ನು ಪೂರ್ಣಗೊಳಿಸುತ್ತಾರೆ. ಗಣತಿಯಲ್ಲಿ ತಾವು ಭಾಗವಹಿಸಿ ಗಣತಿಯನ್ನು ಯಶಸ್ವಿಗೊಳಿಸುವಂತೆ ಹೊಸನಗರ ತಹಸೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

