Hosanagara

ರಿಪ್ಪನ್‌ಪೇಟೆ ; ಏ.10 ರಿಂದ 13 ರವರೆಗೆ ಸಿದ್ದಿವಿನಾಯಕ ಸ್ವಾಮಿ ಹಾಗೂ ಅನ್ನಪೂರ್ಣೇಶ್ವರಿ ಅಮ್ಮನವರ ರಥೋತ್ಸವ

ರಿಪ್ಪನ್‌ಪೇಟೆ ; ಇಲ್ಲಿನ ಗ್ರಾಮ ದೇವರು ವರಸಿದ್ದಿವಿನಯಕ ಸ್ವಾಮಿ ಹಾಗೂ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಸನ್ನಿದಾನದಲ್ಲಿ ಏಪ್ರಿಲ್ 10 ರಿಂದ 13 ರವರೆಗೆ ವಾರ್ಷಿಕ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಏಪ್ರಿಲ್ 10 ರಂದು ಶುಕ್ರವಾರ ಬೆಳಗ್ಗೆ ಸಿದ್ದಿವಿನಾಯಕ ಸ್ವಾಮಿ ಹಾಗೂ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಫಲನ್ಯಾಸ ಪೂರ್ವಕ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹವಾಚನ, ಗ್ರಹಯಾಗನಾಂದಿ, ಕೌತುಕ ಬಂಧನ,
ಅಂಕುರಾರ್ಪಣ, ಧ್ವಜಾರೋಹಣ, ಬಲಿ,
ಸಂಜೆ ಭೇರಿತಾಡನ, ಅಧಿವಾಸ ಹೋಮ, ಬಲಿ ಪೂಜಾ ಕೈಂಕರ್ಯ ಹಾಗೂ ರಂಗಪೂಜೆ ಜರುಗಲಿದೆ.

ಏಪ್ರಿಲ್ 11 ರ ಶನಿವಾರ ನಿತ್ಯ ಪೂಜೆ ಸಹಿತ ಬೆಳಗ್ಗೆ ರಥಾದಿವಾಸಹೋಮ, ರಥಪೂಜಾ, ಬಲಿ. ಮಹಾಪೂಜಾಪೂರ್ವಕ ಉತ್ಸವ ಬಲಿ. ಮಧ್ಯಾಹ್ನ 12:33ಕ್ಕೆ ಮಹಾರಥೋತ್ಸವಕ್ಕೆ ಚಾಲನೆ, ರಾತ್ರಿ 8ಕ್ಕೆ ರಥಾವರೋಹಣ ಮಹಾಮಂಗಳಾರತಿ ಭೂತಬಲಿ ಶಯನೋತ್ಸವ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಏಪ್ರಿಲ್ 12 ರಂದು ಭಾನುವಾರ ಬೆಳಗ್ಗೆ ಪ್ರಭೋದೋತ್ಸವ ತೀರ್ಥಯಾತ್ರಾ ಅವಭೃತ, ಕೌತುಕವಿಸರ್ಜನ, ಧ್ವಜಾವರೋಹಣ, ಮಹಾಪೂಜೆ ಮಂತ್ರಾಕ್ಷತೆ.

ಏಪ್ರಿಲ್ 13 ರಂದು ಸೋಮವಾರ ಬೆಳಗ್ಗೆ ಗಣಪತಿ ಮತ್ತು ಅಮ್ಮನವರಿಗೆ ಕುಂಭಾಭಿಷೇಕ, ಮಹಾಪೂಜೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>