Charmadi Ghat | ಧಾರಾಕಾರ ಮಳೆಗೆ ರಸ್ತೆಗೆ ಬಿದ್ದ ಮರ ; ಸಂಚಾರ ಅಸ್ತವ್ಯಸ್ಥ

ಮೂಡಿಗೆರೆ: ಚಾರ್ಮಾಡಿ ಘಾಟಿಯ 8ನೇ ತಿರುವಿನಲ್ಲಿ ಶನಿವಾರ ರಸ್ತೆಗೆ ಬೃಹತ್ ಮರ ಬಿದ್ದು ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತು.

ಸಮಾಜ ಸೇವಕ ಹಸನಬ್ಬ ಚಾರ್ಮಾಡಿ ಹಾಗೂ ಮೊಹಮ್ಮದ್ ಆರೀಫ್ ತಂಡ ಹಾಗೂ ಅಲ್ಲಿಯ ಸ್ಥಳೀಯರು ಸೇರಿ ಯಂತ್ರದಿಂದ ಮರವನ್ನು ತೆರವುಗೊಳಿಸಿದ್ದಾರೆ. ಸಂಜೆ 5.30ಕ್ಕೆ ಸಂಚಾರ ಮುಕ್ತವಾಯಿತು. ಆದರೆ ಘಾಟ್ ನಲ್ಲಿ ಅಪಾಯದ ಕುಸಿದ ಎರಡು ಕಡೆಯ ತಡೆಗೋಡೆಗೆ ಎಚ್ಚರಿಕೆ ಫಲಕ ಹಾಕಿ ಅಪಾಯದ ಜಾಗೃತಿ ಮೂಡಿಸಬೇಕಿದೆ.

ಹೇಮಾವತಿ ನದಿಯಲ್ಲಿ ನೀರಿನ ಹರಿವು ಮೊನ್ನೆಗಿಂತ ಏರಿಕೆಯಾಗಿದೆ. ಬಾಳೂರು ಹೋಬಳಿಯ ಮೇಗೂರು ರಾಮಯ್ಯ ಎಂಬುವರ ಮನೆ ಮಳೆಗೆ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ ಅತಿಯಾದ ಮಳೆಯಿಂದ ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ ಆಡುತ್ತಿದೆ. ಹೀಗೆ ಮಳೆ ಮುಂದುವರೆದರೆ ಅಪಾಯ ಸಂಭವಿಸುವ ಸಾಧ್ಯತೆಗಳು ದಟ್ಟವಾಗಿವೆ.

ಕಳೆದ ಮೂರು ದಿನಗಳಿಂದ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಮಳೆಯ ಅರ್ಭಟ ಹೆಚ್ಚಾಗಿದ್ದು ರೈತರ ಕೃಷಿ ಚಟುವಟಿಕೆಗೆ ಅಡಚಣೆಯಾಗಿದೆ. ಗುರುವಾರದಿಂದ ಶನಿವಾರದ ವರೆಗೆ 164.2 ಮಿ.ಮೀ (16.4ಸೆಂ.ಮೀ) ಮಳೆ ದಾಖಲಾಗಿದ್ದು ಶನಿವಾರವೂ ಧಾರಾಕಾರ ಮಳೆ ಮುಂದುವರೆದಿದ್ದು ರೈತರ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ.

ಕಾಫಿ ಬೆಳೆ ಉದುರುವಿಕೆ ಆರಂಭವಾಗಿದೆ. ಕಾಫಿನಾಡು ಮಳೆಯಿಂದ ಸಂಪೂರ್ಣ ಸ್ಥಬ್ದವಾಗಿದೆ. ಕಾವೇರಿ ಹೋರಾಟದ ಬೆನ್ನಲ್ಲೇ ಮಲೆನಾಡಿನಲ್ಲಿ ವರುಣ ಅರ್ಭಟಿಸುತ್ತಿದ್ದಾನೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದ್ದು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಕೆಲವೇ ಅಂತರದಲ್ಲಿ ತಡೆಗೋಡೆ ಕುಸಿದಿದ್ದು ಮಳೆ ಹೆಚ್ಚಾದರೆ ಕುಸಿಯುವ ಅಪಾಯವೂ ಇದೆ. ಇಲ್ಲಿ ರಸ್ತೆ ಪಾಯ ಹಾಕಲು ಪ್ರಪಾತ ಆದುದರಿಂದ ತೊಂದರೆ ಉಂಟಾಗಿದೆ.ಬಲಭಾಗದಲ್ಲಿ ಮುಗಿಲೆತ್ತರದ ಬಂಡೆ ಆಕಾಶಕ್ಕೆ ಮುಖ ಮಾಡಿರುವುದರಿಂದ ಕಲ್ಲು ಬಂಡೆ ಒಡೆಯುವುದು ಕಷ್ಟವಾಗಿದೆ. ಇನ್ನು ಸೋಮನಕಾಡು ಕಣಿವೆ ದೃಶ್ಯ ಪ್ರಫಾತದ ಬಳಿ ಮೊನ್ನೆ ನೀರು ಸಾಗಿಸುತ್ತಿದ್ದ ಲಾರಿ ಬಿದ್ದ ಜಾಗದಲ್ಲಿ ಪೊಲೀಸರು ಬ್ಯಾರೀಕೇಡ್ ಹಾಕಿದ್ದು ಅವು ಕೂಡ ಗಾಳಿಗೆ ಬಿದ್ದು ಹೋಗಿದ್ದು ಇನ್ನು ಸ್ವಲ್ಪ ಗಾಳಿ ಬೀಸಿದರೆ ಬ್ಯಾರಿಕೇಡ್ ಕೂಡ ಪ್ರಪಾತಕ್ಕೆ ಬೀಳುವ ಸಂಭವವಿದೆ.

ಮಳೆಯ ನಡುವೆಯೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಮಳೆಯ ಆರ್ಭಟಕ್ಕೆ ಪ್ರವಾಸಿಗರು ಚಾರ್ಮಾಡಿ ಘಾಟಿಯ ಜಲಪಾತಗಳಿಗೆ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ. ಇನ್ನು ಜಲಪಾತಗಳಂತೂ ಭೋರ್ಗರೆದು ಧುಮುಕಿ ಜನರ ಕಣ್ಮನ ಸೆಳೆಯುತ್ತಿವೆ. ಚಾರ್ಮಾಡಿ ಘಾಟಿಯಲ್ಲಿ ಒಂದು ಮರ ಎರಡು ದಿನದ ಹಿಂದೆ ಬಿದ್ದಿದ್ದು ಅದನ್ನು ಯಂತ್ರದಿಂದ ಕಡಿದು ತೆರವುಗೊಳಿಸಲಾಗಿದೆ.

Malnad Times

Recent Posts

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 hours ago

Rain Alert | ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…

4 hours ago

ಕಾಫಿನಾಡಿನಲ್ಲಿ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಸುರಿದ ಭಾರಿ ಮಳೆ

ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಭಾರಿ…

6 hours ago

ಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ !

ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…

16 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ | ಶೇ. 78.24 ಮತದಾನ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…

17 hours ago

Accident | ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವು !

ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…

18 hours ago