ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ, ಅಗತ್ಯಬಿದ್ದರೆ NIA ಗೆ ವಹಿಸುತ್ತೇವೆ ; ಸಿಎಂ ಸಿದ್ದರಾಮಯ್ಯ

0 227

ಚಿಕ್ಕಮಗಳೂರು : ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ ಸಿಸಿಬಿಗೆ ನೀಡಿದ್ದೇವೆ. ಅಗತ್ಯ ಬಿದ್ದರೆ ಎನ್ಐಎಗೆ ವಹಿಸುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಂಬ್ ಬ್ಲಾಸ್ಟ್ ಪ್ರಕರಣ ಸಿಲ್ಲಿ ಪ್ರಕರಣ ಅಲ್ಲ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಸರ್ಕಾರಕ್ಕೆ ಜನರ ಭದ್ರತೆ ಮುಖ್ಯ, ಜನರಿಗೆ ಸೆಕ್ಯೂರಿಟಿ ಕೊಡಬೇಕು ಎಂದು ಶರಣ್ ಗೌಡ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಎನ್ ಐಎಗೆ ನೀಡಬೇಕೆಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿ, ಪ್ರಕರಣವನ್ನು ಸಿಸಿಬಿಗೆ ನೀಡಿದ್ದೇವೆ. ತನಿಖೆ ಆರಂಭವಾಗಿದೆ. ಯಾರು ಸಿಕ್ಕಿಲ್ಲ. ಸಿಕ್ಕರೇ ನೋಡೋಣ, ಅಗತ್ಯ ಬಿದ್ದರೆ ಎನ್ ಐಎ ಗೆ ನೀಡಲಾಗುವುದು ಎಂದರು.

ಬ್ರಾಂಡ್ ಬೆಂಗಳೂರು ಬಾಂಬ್ ಬೆಂಗಳೂರು ‌ಆಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರ ಕಾಲದಲ್ಲೂ ಬಾಂಬ್ ಬ್ಲಾಸ್ಟ್ ಆಗಿತ್ತು. 2008ರಲ್ಲಿ ನಾಲ್ಕು ಬಾರಿ ಬಾಂಬ್ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಪ್ರಕರಣ ಸಮರ್ಥನೆ ಮಾಡುತ್ತಿಲ್ಲ. ಬಿಜೆಪಿ ರಾಜಕೀಯ ಮಾಡಬಾರದು ಎಂದರು.

Leave A Reply

Your email address will not be published.

error: Content is protected !!