ರಿಪ್ಪನ್‌ಪೇಟೆ ; ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಒಕ್ಕಲಿಗ ಸಮಾಜ ಜನಹಿತ ಕಾರ್ಯವನ್ನು ಮಾಡುವ ಮೂಲಕ ನಮ್ಮ ಸಮಾಜದಲ್ಲಿ ಕಡುಬಡವರನ್ನು ಗುರುತಿಸಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದರೊಂದಿಗೆ ಮಾದರಿಯಾಗಿದ್ದಾರೆಂದು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.
ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ವಿಶ್ವಮಾನವ ಒಕ್ಕಲಿಗರ ಸಭಾಭವನದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಅಡುಗೆ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸಂಘಟನೆಯೊಂದಿಗೆ ಇತರೆ ಸಮಾಜವನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಏಕೈಕ ಸಮಾಜ ಒಕ್ಕಲಿಗ ಸಮಾಜವಾಗಿದೆ. ಕುವೆಂಪುರವರು ಒಂದು ಜಾತಿಗೆ ಸೀಮಿತವಾಗದೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕವಿವಾಣಿಯಂತೆ ನಮ್ಮ ಸಮಾಜ ದುರ್ಬಲರ ಮತ್ತು ಸಮಾಜದ ಕಟ್ಟಕಡೆಯವರನ್ನು ಮುಖ್ಯ ವಾಹಿನಿಗೆ ತರುವುದರೊಂದಿಗೆ ಪ್ರೋತ್ಸಾಹಿಸುತ್ತಿದೆ. ಸಮಾಜದ ಪ್ರತಿಭಾವಂತರನ್ನು ಹಾಗೂ ಸಮಾಜಕ್ಕಾಗಿ ಶ್ರಮಿಸುವವರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಮಹಾತ್ಕಾರ್ಯದಲ್ಲಿ ರಿಪ್ಪನ್‌ಪೇಟೆ ಒಕ್ಕಲಿಗರ ಸಮಾಜ ಮಾಧರಿಯಾಗಿದೆ ಎಂದು ಹೇಳಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದೂಳಿದವರರನ್ನು ಮೇಲೆತ್ತುವ ಕೆಲಸವನ್ನು ಮಾಡುವಂತಾಗಬೇಕು ಎಂದು ಹೇಳಿ, ಒಕ್ಕಲಿಗ ಸಮಾಜದಲ್ಲಿನ ಹಲವರು ಉನ್ನತ ಹುದ್ದೆಯಲ್ಲಿದ್ದಾರೆ. ಅಂತವರು ಸಮಾಜಕ್ಕೆ ಸದಾ ಸ್ಪಂದಿಸುವಂತಾಗಬೇಕು ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಹೊಸನಗರ ತಾಲ್ಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲು ಧರ್ಮೇಶ, ಬೆಂಗಳೂರು ಉದ್ಯಮಿ ಸರಳ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಇಂಜಿನಿಯರ್ ವೀರೇಂದ್ರ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪರಮೇಶ, ಹೆಚ್.ವಿ.ಹರೀಶ, ವಜ್ರಾಕ್ಷಿ, ಇ.ಡಿ.ಮಂಜುನಾಥ, ಟಿ.ಎಂ. ಕೃಷ್ಣಮೂರ್ತಿ, ಷಣ್ಮುಖಪ್ಪಗೌಡ, ಕಲ್ಲೂರು ತೇಜಮೂರ್ತಿ, ಸಂತೋಷ್ ಕುಮಾರ (ಚಿಂತು), ಹೆಚ್.ಪಿ.ರಾಜೇಶ, ಹೆಚ್.ಆರ್.ಅಶೋಕ ಹಾಲುಗುಡ್ಡೆ, ಶ್ರೀಧರ ಕಲ್ಲೂರು, ಎಸ್.ರಾಜು, ಸುಮಂಗಳ, ಕೃಷ್ಣಮೂರ್ತಿ, ಡ್ರೈವರ್ ಮಂಜುನಾಥ ಕೋಟೆತಾರಿಗ, ಮಹೇಶ ಕೋಟೆತಾರಿಗ ಇನ್ನಿತರರು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಪರಮೇಶ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕೋಣಂದೂರು ಶ್ರೀಗಳ ಆಶೀರ್ವಾದ ಪಡೆದ ಸಭಾಪತಿ ಹೊರಟ್ಟಿ

ರಿಪ್ಪನ್‌ಪೇಟೆ ; ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿಯವರು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





