ಅಪರಾಧ ಸುದ್ದಿ

ಅನ್ನ ಹಾಕಿದ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಖದೀಮ!

ಹಸಿದು ಬಂದವನಿಗೆ ಮಾನವೀಯತೆಯಿಂದ ಅನ್ನ ನೀಡಿದ ಮನೆಯಲ್ಲೇ ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ತೀರ್ಥಹಳ್ಳಿಯ ರಥಬೀದಿಯಲ್ಲಿ ಅ. 27ರ ನಡೆದಿದೆ.

Thirthahalli Theft

ತೀರ್ಥಹಳ್ಳಿ: ಹಸಿದು ಬಂದವನಿಗೆ ಮಾನವೀಯತೆಯಿಂದ ಅನ್ನ ನೀಡಿದ ಮನೆಯಲ್ಲೇ ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ತೀರ್ಥಹಳ್ಳಿಯ ರಥಬೀದಿಯಲ್ಲಿ ಅಕ್ಟೋಬರ್ 27ರ ಮಂಗಳವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಘಟನೆಯ ವಿವರ:

ಮಧ್ಯಾಹ್ನ ಊಟದ ಹೊತ್ತಿಗೆ ರಥಬೀದಿಯ ಮನೆಯೊಂದಕ್ಕೆ ಬಂದ ಅಪರಿಚಿತನೊಬ್ಬ ತನಗೆ ವಿಪರೀತ ಹಸಿವು ಮತ್ತು ಆಯಾಸವಾಗುತ್ತಿದೆ ಎಂದು ಹೇಳಿದ್ದಾನೆ. ಆತನ ಸ್ಥಿತಿ ಕಂಡು ಮರುಗಿದ ಮನೆಯವರು ಪ್ರೀತಿಯಿಂದ ಒಳಗೆ ಕರೆದು ಊಟ ಬಡಿಸಿದ್ದಾರೆ.

ಊಟ ಮುಗಿಸಿ ಧನ್ಯವಾದ ಹೇಳುವ ಬದಲು, ಆತ ಮನೆಯವರ ಕಣ್ತಪ್ಪಿಸಿ ಅಲ್ಲಿದ್ದ ಮೊಬೈಲ್ ಫೋನ್ ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆತ ಹೋದ ಕೆಲವೇ ಹೊತ್ತಿನಲ್ಲಿ ಮೊಬೈಲ್ ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದ್ದು, ತಕ್ಷಣವೇ ತೀರ್ಥಹಳ್ಳಿ ಠಾಣೆಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.

ಆರೋಪಿ ಬಂಧನ:

ದೂರು ದಾಖಲಿಸಿಕೊಂಡ ತಕ್ಷಣ ತನಿಖೆ ಚುರುಕುಗೊಳಿಸಿದ ಪೊಲೀಸರು, ಮಾಳೂರು ಸಮೀಪ ಕದ್ದ ಮೊಬೈಲ್ ಅನ್ನು ಬೇರೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆರೋಪಿಯನ್ನು ಮಾಲು ಸಮೇತ ಸೆರೆಹಿಡಿದಿದ್ದಾರೆ. ಬಳಿಕ ವಶಪಡಿಸಿಕೊಂಡ ಮೊಬೈಲನ್ನು ಅದರ ಮಾಲೀಕರಿಗೆ ಒಪ್ಪಿಸಲಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!