ಅಪರಾಧ ಸುದ್ದಿ

ಸಾಗರದಲ್ಲಿ ಮೂರು ಗೋಕಳ್ಳತನ ಪ್ರಕರಣಗಳ ಭೇದನೆ: ಓರ್ವನ ಬಂಧನ

3 ಜಾನುವಾರು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಗರದಲ್ಲಿ ಮೂರು ಗೋಕಳ್ಳತನ ಪ್ರಕರಣಗಳ ಬೇಧನೆ Theft

ಸಾಗರ : ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ವರದಿಯಾಗಿದ್ದ 3 ಜಾನುವಾರು ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ ಎಂದು ಎಎಸ್‌ಪಿ ಡಾ. ಬೆನಕ ಪ್ರಸಾದ್ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶನಿವಾರ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಸಿಸಿಟಿವಿ ಕ್ಯಾಮೆರಾಗಳ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಭದ್ರಾವತಿ ಮೂಲದ ಬರ್ಕತ್ ಉಲ್ಲಾ ಎಂಬಾತನನ್ನು ಬಂಧಿಸಲಾಗಿದೆ. ಇದೇ ಪ್ರಕರಣದ ಇನ್ನೋರ್ವ ಆರೋಪಿ ನಸ್ರುಲ್ಲಾ ತಲೆಮರೆಸಿಕೊಂಡಿದ್ದಾನೆ. ಇತ್ತೀಚೆಗೆ ಸಾಗರದ ವಾಟರ್ ಟ್ಯಾಂಕ್ ಬಳಿ ಹಸುವೊಂದರ ಮೇಲೆ ಹಲ್ಲೆ ಮಾಡಿದ ವೈರಲ್ ವಿಡಿಯೋ ಕೃತ್ಯವನ್ನು ಇದೇ ನಸ್ರುಲ್ಲಾ ಎಸಗಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದರು.

ಗೋಕಳ್ಳತನಕ್ಕೆ ಬ್ರೇಕ್ ಹಾಗೂ ವಿಶೇಷ ತಂಡ:

ಇತ್ತೀಚೆಗೆ ನಡೆದ ‘ಪ್ರಜಾಸೇವೆ’ ಕಾರ್ಯಕ್ರಮದಲ್ಲಿ ಶಾಸಕರು ನೀಡಿದ ಸೂಚನೆಯಂತೆ, ಜಾನುವಾರುಗಳ ಕಳ್ಳತನ ಮತ್ತು ಅಕ್ರಮ ಸಾಗಾಟವನ್ನು ತಡೆಯಲು ಪೊಲೀಸ್ ಇಲಾಖೆ ವಿಶೇಷ ತಂಡವೊಂದನ್ನು ರಚಿಸಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು.

ಮಹಿಳಾ ರಕ್ಷಣೆ :

ತಾಲೂಕಿನಲ್ಲಿ ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಸಂತ್ರಸ್ತೆಯರು ಭಯಪಡದೆ ದೂರು ನೀಡಬಹುದು. ನೇರವಾಗಿ ತಮ್ಮ ಗಮನಕ್ಕೆ ತಂದರೂ ಸೂಕ್ತ ನ್ಯಾಯ ಒದಗಿಸಲಾಗುವುದು ಎಂದು ಎಎಸ್‌ಪಿ ಭರವಸೆ ನೀಡಿದರು.

ಕೇಬಲ್ ಕಳ್ಳರಿಗೆ ಎಚ್ಚರಿಕೆ:

ಕೃಷಿ ಪಂಪ್‌ಸೆಟ್‌ಗಳ ಕೇಬಲ್ ಕದಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಅವರಿಂದ ಕದ್ದ ತಾಮ್ರದ ತಂತಿಗಳನ್ನು ಖರೀದಿಸುವ ಅಂಗಡಿ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು.

ಗಾಂಜಾ ಸೇವನೆ – ಐವರ ಮೇಲೆ ಕೇಸ್:

ವಸತಿಗೃಹವೊಂದರಲ್ಲಿ ಯುವತಿಯೋರ್ವಳು ಸೇರಿ ನಾಲ್ವರು ವಿಚಿತ್ರವಾಗಿ ವರ್ತಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಸೇವನೆ ಮಾಡಿದ 4 ಜನ ಹಾಗೂ ಅವರಿಗೆ ಗಾಂಜಾ ಪೂರೈಸಿದ ಓರ್ವ ಸೇರಿ ಒಟ್ಟು 5 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಸಂಪೂರ್ಣ ಕಾರ್ಯಾಚರಣೆಗಳಲ್ಲಿ ನಗರ ಠಾಣೆ ಇನ್ಸ್‌ಪೆಕ್ಟರ್ ಪುಲ್ಲಯ್ಯ ರಾಥೋಡ್, ಪಿಎಸ್‌ಐ ಶಾಂತರಾಜ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಸನಾವುಲ್ಲಾ, ರವಿಕುಮಾರ್, ಕೃಷ್ಣಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!