Dengue | ಮಹಾಮಾರಿ ಡೆಂಗ್ಯೂಗೆ 6 ವರ್ಷದ ಬಾಲಕಿ ಬಲಿ !

Written by malnadtimes.com

Published on:

KADURU | ಮಹಾಮಾರಿ ಡೆಂಗ್ಯೂ (Dengue) ಜ್ವರಕ್ಕೆ 6 ವರ್ಷದ ಬಾಲಕಿ ಬಲಿಯಾದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಸಾನಿಯಾ (06) ಸಾವನ್ನಪ್ಪಿದ ಬಾಲಕಿ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾಳೆ.

Read more: ಭಾಗ್ಯಲಕ್ಷ್ಮಿ ಬಾಂಡ್ ಇದ್ದವರ ಖಾತೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಲಿದೆ 1 ಲಕ್ಷ ಹಣ !

ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತಳ ತಂದೆ ಆಸಿಫ್ ರಾಜ್ಯ ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದ್ದು, ಬಾಲಕಿಯ ಮೃತ ದೇಹದ ಮುಂದೆ ನಿಂತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಬೇಡ !

‘ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ’ ಎಂದು ಬೇಸರ ಹೊರಹಾಕಿದ್ದಾರೆ.

Read more: ಭಾಗ್ಯಲಕ್ಷ್ಮಿ ಬಾಂಡ್ ಇದ್ದವರ ಖಾತೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಲಿದೆ 1 ಲಕ್ಷ ಹಣ !

Leave a Comment