ರಿಪ್ಪನ್‌ಪೇಟೆ ; ಯು.ಎಸ್.ಎ.ಯ ಸ್ಟ್ಯಾನ್‌ಫೋರ್ಡ್ ವಿ.ವಿ. ಮತ್ತು ಎಲ್ಸ್ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಡಾ. ಜೆ. ಜಿ. ಮಂಜುನಾಥರವರು ಸತತ 6ನೇ ಬಾರಿ ಸ್ಥಾನ ಪಡೆದಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ಇಲ್ಲಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಜೆ. ಜಿ. ಮಂಜುನಾಥ, “Analytical Chemistry and Energy” ವಿಷಯಗಳಲ್ಲಿ ಅಂತರಾಷ್ಟ್ರಿಯ ಮಟ್ಟದಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳ ಆಧಾರದ ಮೇಲೆ ಇವರು 2025ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 2911ನೇ ಸ್ಥಾನವನ್ನು ಮತ್ತು ವಿಶ್ವದ ವೃತ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 53190ನೇ ಸ್ಥಾನವನ್ನು ಪಡೆದಿದ್ದಾರೆ. ಇವರು 221 ಅಂತರಾಷ್ಟ್ರೀಯ ಲೇಖನಗಳನ್ನು ಅತ್ಯಂತ ಪ್ರತಿಷ್ಟಿತ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದು, 30 ಪುಸ್ತಕಗಳನ್ನು ಹೊರತಂದಿದ್ದಾರೆ. 32 ಜರ್ನಲ್‌ಗಳಲ್ಲಿ ಎಡಿಟೋರಿಯಲ್ ಬೋರ್ಡ್ಮೆಂಬರ್ ಆಗಿಯೂ ಹಾಗೂ Sensing technology (Taylor and francis) ಜರ್ನಲ್‌ನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಜಂಬಳ್ಳಿ ಗ್ರಾಮದ ಜೆ. ಶಾರದಮ್ಮ ಗಂಗಾಧರಪ್ಪ ಗೌಡರ ಪುತ್ರ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.