ಸಾಗರ: ಸಾಗರದ ಖ್ಯಾತ ಉದ್ಯಮಿ ಮತ್ತು ನಗರಸಭಾ ಸದಸ್ಯರಾದ ಟಿಪ್ ಟಾಪ್ ಬಷೀರ್ ಅವರ ಮನೆ ಮೇಲೆ ಆರ್ಥಿಕ ಅಪರಾಧ ವಿಭಾಗ (ED) ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ದಾಳಿ ಎಲ್ಲಿ ನಡೆದಿದೆ?
ಸಾಗರ ನಗರದ ಕೆಳದಿ ರಸ್ತೆಯಲ್ಲಿರುವ ಬಷೀರ್ ಅವರ ನಿವಾಸದಲ್ಲಿ ಈ ದಾಳಿ ನಡೆದಿದೆ. ಸತತ 18 ಗಂಟೆಗಳಿಗೂ ಹೆಚ್ಚು ಕಾಲ ಏಳು ಅಧಿಕಾರಿಗಳ ತಂಡವು ದಾಖಲೆಗಳ ಪರಿಶೀಲನೆ ನಡೆಸಿದೆ.
ಬಷೀರ್ ಸಹಕಾರ ನೀಡಿದ್ಧಾರೆ:
ಈ ಪರಿಶೀಲನೆ ವೇಳೆ ಬಷೀರ್ ಅವರು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ದಾಳಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲದಿದ್ದರೂ, ಸ್ಥಳೀಯವಾಗಿ ಈ ಸುದ್ದಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
Read More:ಜಿಲ್ಲೆಯ ಯಾವುದೇ ಮಕ್ಕಳು ಆಧಾರ್‌ನಿಂದ ಹೊರಗುಳಿಯಬಾರದು : ನ್ಯಾಯಾಧೀಶ ಸಂತೋಷ್ ಎಂ.ಎಸ್.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

