ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ !

Written by Mahesha Hindlemane

Updated on:

ಹೊಸನಗರ ; ತಾಲ್ಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊರಗೋಡು ಗ್ರಾಮದ ಪವನ್‌ಕುಮಾರ್‌ ಎಂಬುವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೂ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಲಕ್ಷ್ಮಣಗೌಡರ ಮಾಲೀಕತ್ವದ ಮನೆಯಲ್ಲಿ ಪವನ್‌ಕುಮಾರ್ ದಂಪತಿ ವಾಸ ಮಾಡುತ್ತಿದ್ದು ಅವರು ಸೊನಲೆಯಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದು ಅದಕ್ಕಾಗಿ ಬಾಡಿಗೆ ಮನೆಗೆ ಬೀಗ ಹಾಕಿಕೊಂಡು ಬೆಳಗ್ಗೆ ಸೊನಲೆಗೆ ಹೋಗಿದ್ದರು.

ಬೆಂಕಿ ತಗುಲಿದ ನಂತರ ಮನೆಯಲ್ಲಿ ಎತ್ತರವಾಗಿ ಹೊಗೆ ಕಾಣಿಸಿಕೊಂಡ ನಂತರ ಊರಿನವರ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಬೆಂಕಿ ನಂದಿಸಿದ್ದಾರೆ.

ಮನೆಯ ಒಳಗೆ ಇದ್ದ ಗೃಹೋಪಯೋಗಿ ವಸ್ತುಗಳು, ಹೊಸಮನೆ ನಿರ್ಮಾಣಕ್ಕೆ ತಂದಂತಹ ಸುಮಾರು 2 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಎಲೆಕ್ಟ್ರಿನಿಕ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ.

Leave a Comment