ಹೊಸನಗರ

ಹೊಸನಗರ : ಭಾರಿ ಮಳೆಗೆ ಚಿತ್ರಮಂದಿರದ ಗೋಡೆ ಕುಸಿತ !

ಹೊಸನಗರ : ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಎಜೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಜೆಸಿಎಂ ರಸ್ತೆಯಲ್ಲಿರುವ ಪ್ರದೀಪ್‌ರ ಒಡೆತನದ ಈ ಹಿಂದೆ ಇದ್ದ ಶ್ರೀನಿವಾಸ ಚಿತ್ರಮಂದಿರದ ಕಟ್ಟಡದ ಗೋಡೆ ಕುಸಿತವಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

WhatsApp Group Join Now
Telegram Group Join Now
Instagram Group Join Now

ಸುಮಾರು 30 ವರ್ಷಗಳ ಹಿಂದೆ ಈ ಕಟ್ಟಡ ಶ್ರೀನಿವಾಸ ಚಿತ್ರಮಂದಿರವಾಗಿ ಇಲ್ಲಿನ ಜನರಿಗೆ ಮನರಂಜನೆ ನೀಡುತ್ತಿತ್ತು. ನಂತರ ಚಿತ್ರ ಮಂದಿರವನ್ನು ಮುಚ್ಚಿ ಗ್ಯಾರೇಜ್ ಮಾಡಲು ಅನುವು ಮಾಡಿಕೊಡಲಾಗಿತ್ತು. ಇಂದು ಭಾನುವಾರವಾಗಿರುವುದರಿಂದ ಗ್ಯಾರೇಜಿನಲ್ಲಿ ಯಾರು ಇರಲಿಲ್ಲ. ಮಧ್ಯಾಹ್ನ 2 ಗಂಟೆ ಸುಮಾರಿಗೆ  ಒಂದು ಬದಿಯ ಗೋಡೆ ಕುಸಿತ ಕಂಡಿದೆ. ಈ ಘಟನೆಯಲ್ಲಿ ಕಟ್ಟಡದ ತಗಡು ಹಾಗೂ ಸಿನಿಮಾ ಪ್ರಾಜೆಕ್ಟರ್‌ಗೆ ಹಾನಿಯಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!