ಸನಾತನ ಸಂಸ್ಕೃತಿ ಉಳಿವಿಗೆ ಹಿಂದೂ ಸಂಘಟನೆ ಅತ್ಯಗತ್ಯ ; ಹಾರಿಕ ಮಂಜುನಾಥ್

Written by Mahesha Hindlemane

Published on:

ರಿಪ್ಪನ್‌ಪೇಟೆ ; ನಾವೆಲ್ಲ ಹಿಂದೂವಾಗಿ ಬದುಕಿದರೆ ಮಾತ್ರ ಭಾರತೀಯ ಸಂಸ್ಕೃತಿ ಪರಂಪರೆ ಉಳಿಯುತ್ತದೆ. ಹಿಂದೂ ಸಮಾಜವು ಸಾಮರಸ್ಯೆದಿಂದ ಬದುಕುವುದರೊಂದಿಗೆ ಸ್ವದೇಶಿ ಸ್ವಭಾಷಾ ಸ್ವಭೂಷಾ ಸ್ವಾಭಿಮಾನ ಸಾವಯವ ಈ ಪಂಚ ವಿಚಾರವನ್ನು ಅಳವಡಿಸಿಕೊಳ್ಳೋಣ ಇದರಿಂದ ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ ಬಲಿಷ್ಟ ಭಾರತವಾಗಿಸಲು ನಾವುಗಳು ಪಣತೊಡಬೇಕು ಎಂದು ಯುವ ವಾಗ್ಮಿ ಹಾರಿಕ ಮಂಜುನಾಥ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯಲ್ಲಿ ಹೊಸನಗರ ತಾಲ್ಲೂಕು ಹಿಂದೂ ಸಂಗಮ ಅಯೋಜನಾ ಸಮಿತಿಯವರು ಬಾಳೂರು, ಚಿಕ್ಕಜೇನಿ, ರಿಪ್ಪನ್‌ಪೇಟೆ ಮಂಡಲ ಆಯೋಜಿಸಲಾದ ಹಿಂದೂ ಸಂಗಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹಿಂದೂ ಸಂಸ್ಕೃತಿ ಸಾವಿರಾರು ವರ್ಷದ ಇತಿಹಾಸ ಹೊಂದಿದೆ. ವೇದ, ಯೋಗ, ಉಪನಿಷತ್ತು ರಾಮಾಯಣ ಮಹಾಭಾರತ ಈ ಎಲ್ಲ ಗ್ರಂಥ, ಕಥೆ, ಪುರಾಣಗಳು ಧರ್ಮ ನಡೆದು ಬಂದ ಇತಿಹಾಸ ಸಾರುತ್ತವೆ. ಮಾನವ ಜೀವನಕ್ಕೆ ದಾರಿ ತೋರುವ ದೀಪಗಳಿದ್ದಂತೆ ಅವುಗಳ ಪಾಲನೆ ಎಲ್ಲರೂ ಮಾಡಬೇಕು ಎಂದು ತಿಳಿಸಿದ್ದರು.

ದೇಶ-ಧರ್ಮ ಉಳಿಕೆಗೆ ಸಂಘಟಿತರಾಗಲು ಸನ್ನದ್ದರಾಗಬೇಕು. ಹಿಂದೂ ಧರ್ಮ ಜಾತಿ ಹೆಸರಿನಲ್ಲಿ ಒಡಕು ತರುವವರ ಬಗ್ಗೆ ಜಾಗೃತರಾಗಬೇಕು. ಭಾರತದ ಪ್ರತಿ ಮನೆಗಳಲ್ಲಿ ಆಯೋಧ್ಯಯನ್ನಾಗಿ ಮೂಡಿಸುವುದು ಭಾರತ ಗುರಿಯಾಗಬೇಕು. ಮಕ್ಕಳಿಗೆ ಧರ್ಮಗ್ರಂಥ ಭೋದಿಸಿ ವಾರಕ್ಕೆ ಒಂದು ದಿನವಾದರೂ ದೇವಸ್ಥಾನದಲ್ಲಿ ಭಜನೆ ಮಾಡಿದರೆ ಸಾಕು ಹಿಂದೂ ಧರ್ಮ ಸಂಘಟನೆ ಸಾಧ್ಯ. ಧರ್ಮಸಂಸ್ಕಾರ ನಮ್ಮ ಮನೆಯಿಂದ ಆರಂಭವಾಗಬೇಕು ಎಂದ ಅವರು, ಮಹಿಳೆಯರು ಹಣೆಗೆ ಕುಂಕುಮ ಇಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಎಂದರು.

ಹೊಸನಗರ ತಾಲ್ಲೂಕು ಹಿಂದೂ ಸಂಗಮ ಅಯೋಜನ ಸಮಿತಿ ಅಧ್ಯಕ್ಷ ವಿನಯ್‌ಹೆಗ್ಗರೆ ಅಧ್ಯಕ್ಷತೆ ವಹಿಸಿದ್ದರು. ಸಸ್ಯ ಸಂಶೋಧನಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ರಿಪ್ಪನ್‌ಪೇಟೆಯ ಅನಂತಮೂರ್ತಿ ಜವಳಿಯವರು ತಮ್ಮ ಕೃಷಿ ಕ್ಷೇತ್ರದಲ್ಲಿನ ಸಾಧಕ ಬಾಧಕಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ನಾಗರತ್ನ ದೇವರಾಜ್ ಪ್ರಮೋದ್ ಸಂಗಡಿಗರು ಪ್ರಾರ್ಥಿಸಿದರು. ಸುಮಾ ಗಣೇಶ ಹತ್ವಾರ್ ಸ್ವಾಗತಿಸಿದರು. ಕಾರ್ತಿಕ ಕೌಡಿನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ವಂದಿಸಿದರು.

Leave a Comment