Ripponpete

ವಿದ್ಯಾದಾನವೇ ಶ್ರೇಷ್ಟ ದಾನ ; ಡಾ. ಶಾಂತಾರಾಮ ಪ್ರಭು

ರಿಪ್ಪನ್‌ಪೇಟೆ ; ವಿದ್ಯೆ, ಶೀಲಾ, ವ್ಯಕ್ತಿತ್ವ ವಿಕಸನ ಈ ಮೂರು ಗುಣಗಳೇ ತ್ರಿವಿಧ ದಾಸೋಹಗಳಾಗಿವೆ. ಅಕ್ಷರಸ್ಥರೆ ಹೆಚ್ಚ ಅವಿಧ್ಯಾವಂತರಾಗುತ್ತಿದ್ದಾರೆ. ಆದರೆ ಅನಕ್ಷರಸ್ಥರೆ ವಿದ್ಯಾವಂತರಿಗಿಂತ ಹೆಚ್ಚು ಪ್ರಜ್ಞೆ ಉಳವರಾಗಿದ್ದಾರೆಂದು ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಾ‌. ಶಾಂತಾರಾಮ ಪ್ರಭು ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ರಿಪ್ಪನ್‌ಪೇಟೆಯ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ ಆಭಿಮಾನಿಗಳ ಬಳಗದವರು ಆಯೋಜಿಸಲಾದ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಕಾಯಕಯೋಗಿ ಡಾ. ಶಿವಕುಮಾರ ಮಹಾಸ್ವಾಮೀಜಿಯವರ 119ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಅನ್ನ ದಾನಂ ಪರಂ ದಾನಂ ಪ್ರತಿಯೊಂದು ಜೀವಿಯು ಬದುಕಿಗಾಗಿ ತಿನ್ನುವ ಆಹಾರವೇ ಅನ್ನ ಸ್ವರೂಪವಾಗಿದೆ. ವಿದ್ಯಾದಾನ ದೊಡ್ಡದು ಅನ್ನದಿಂದ ಕ್ಷಣ ಕಾಲ ತೃಪ್ತಿ ದೊರೆತರೆ ಜೀವನ ಪೂರ್ತಿ ಬದುಕು ನೀಡುವುದು ಶಿಕ್ಷಣ. ಆದರೆ ಇಂದು ಅಕ್ಷರ ಜ್ಞಾನವಿಲ್ಲದ ಅನಕ್ಷರಸ್ಥರು ಕೂಡಾ ವಿದ್ಯಾವಂತರಾಗಿದ್ದಾರೆ. ವರ್ತಮಾನದ ಕಾಲಘಟ್ಟದಲ್ಲಿ ಅಕ್ಷರ ಜ್ಞಾನ ಪಡೆದವರೇ ಅವಿದ್ಯಾವಂತರಾಗಿ ಹೊರ ಹೊಮ್ಮತ್ತಿರುವುದು ಖೇದಕರ ಸಂಗತಿಯೆಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಗಾಂಧಿ ತತ್ವ ಸಿದ್ದಾಂತ ಇಲ್ಲದ ರಾಜಕಾರಣ ಮಹಾಪಾಪ. ಶೀಲವಿಲ್ಲದ ಶಿಕ್ಷಣ ಶೋಭೆ ತರದು ಸಂಸ್ಕಾರಯುವ ಶೀಲವಂತ ಸಂಪೂರ್ಣ ವ್ಯಕ್ತಿತ್ವ ರೂಪಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು. ಜಾತಿ ನಾಲ್ಕು ಗೊಡೆಗಳ ಮಧ್ಯ ಸೀಮಿತವಾಗಿರಲ್ಲಿ ದಾರ್ಶನಿಕರನ್ನು ಜಾತಿ ಪಟ್ಟಕ್ಕೆ ಎಳೆ ತರುವುದು ತರವಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಡಾ.ಶಿವಕುಮಾರ ಮಹಾಸ್ವಾಮಿಗಳ ಅಭಿಮಾನಿಗಳ ಬಳಗದ ಸಂಚಾಲಕ ಕಗ್ಗಲಿ ಲಿಂಗಪ್ಪ ವಹಿಸಿದ್ದರು.

ಪಿಎಸ್‌ಐ ರಾಜುರೆಡ್ಡಿ ಸಮಾರಂಭವನ್ನು ಉದ್ಘಾಟಿಸಿದರು. ಅಖಿಲಭಾರತ ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ಉಮೇಶ್ ಮುಖ್ಯ ಆತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ದೂನ ಸೋಮಶೇಖರ (ರಾಜು) ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ನಿರೂಪಿಸಿದರು. ಪದ್ಮಾ ಸುರೇಶ ವಂದಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>