ಹೊಸನಗರ : ತಾಲ್ಲೂಕಿನಲ್ಲಿ ಖಾಲಿ ಇರುವ ಒಟ್ಟು 09 ಪುರುಷ ಹಾಗು ಮಹಿಳಾ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವಾ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಸೂಕ್ತ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಯಾರೆಲ್ಲ ಅರ್ಹರು ?
ಅರ್ಜಿದಾರರು ಭಾರತೀಯ ಪ್ರಜೆಯಾಗಿದ್ದು, 19ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. 10ನೇ ತರಗತಿ ಉತ್ತೀರ್ಣರಾದರು, ಆರೋಗ್ಯದಲ್ಲಿ ಸಶಕ್ತರಾಗಿರುವವರು, ಯಾವುದೇ ಕ್ರಿಮಿನಲ್ ಹಿನ್ನಲೆ ಹೊಂದಿಲ್ಲದವರು ಅರ್ಜಿ ಸಲ್ಲಿಸಲು ಅರ್ಹರು.
ಉಚಿತವಾಗಿ ಅರ್ಜಿ ಸಲ್ಲಿಸಲು ಬಯಸುವವರು ಗೃಹ ರಕ್ಷಕ ದಳದ ಘಟಕ/ ಉಪ ಘಟಕದ ಕಚೇರಿಯ ವಾರದ ಕವಾಯತ್ತಿನ ದಿನ ಬೆಳಗ್ಗೆ 10 ರಿಂದ ಸಂಜೆ 5-30 ಸಮಯದಲ್ಲಿ ಅರ್ಜಿ ಪಡೆಯಬಹುದು.
ಅರ್ಜಿ ಸಲ್ಲಿಸಲು 2026ರ ಫೆಬ್ರವರಿ 3 ಕೊನೆಯ ದಿನವಾಗಿದ್ದು, ಹೊಸನಗರ ತಾಲೂಕಿನ ಅರ್ಜಿ ಸಲ್ಲಿಸಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ ಗೃಹ ರಕ್ಷಕದಳದ ಭೋದಕರಾದ ಡಿ. ಮಹೇಶ್ (9632538294) ಹಾಗು ಘಟಕಾಧಿಕಾರಿ 9901004223 ಸಂಪರ್ಕಿಸಲು ಕೋರಿದ್ದಾರೆ.

