ಶಿವಮೊಗ್ಗ ಸುದ್ದಿ

ಲಂಚ ಪಡೆಯುತ್ತಿದ್ದ ವೇಳೆ ಇಂಡುವಳ್ಳಿ ಗ್ರಾ.ಪಂ. ಪಿಡಿಓ ಬಂಧನ

SORABA ; ಇ-ಖಾತೆ ಮಾಡಿಕೊಡಲು 5 ಸಾವಿರ ರೂ.ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕು, ಇಂಡುವಳ್ಳಿ ಗ್ರಾ.ಪಂ. ಯ ಪ್ರಭಾರ ಪಿಡಿಓ ಈಶ್ವರಪ್ಪರವನ್ನು ಟ್ರ‍್ಯಾಪ್ ಮಾಡಿ ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಅಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬಂಧ ವಶಕ್ಕೆ ಪಡೆದ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎಸ್.ಸುರೇಶ್ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಹಮ್ಮದ್ ಗೌಸ್ ರವರ ತಂದೆ ಭಾಷಾ ಸಾಬ್‌ನವರು ಇಂಡುವಳ್ಳಿ ಗ್ರಾಮದಲ್ಲಿ ಜಮೀನನ್ನು ಹೊಂದಿದ್ದು, ಅದರಲ್ಲಿ ಒಂದು ಮನೆಯನ್ನು ಕಟ್ಟಿಕೊಂಡಿರುತ್ತಾರೆ. ಆ ಮನೆಯ ಮೇಲೆ ಲೋನ್ ತೆಗೆದುಕೊಳ್ಳುವ ಸಂಬಂಧ, ಮನೆ ಇರುವ ಜಾಗವನ್ನು ತನ್ನ ತಾಯಿ ಮಮ್ರಾಜ್ ರವರ ಹೆಸರಿನಲ್ಲಿ ಈ-ಖಾತಾ ಮಾಡಿಕೊಡುವಂತೆ ಇಂಡುವಳ್ಳಿ ಗ್ರಾಮ ಪಂಚಾಯ್ತಿಗೆ ಅರ್ಜಿಯನ್ನು ಸಲ್ಲಿಸಿದ್ದು, ಇಂಡುವಳ್ಳಿ ಗ್ರಾಮದ ಪ್ರಭಾರ ಪಿಡಿಓ ರವರಾದ ಈಶ್ವರಪ್ಪ ರವರು ಮನೆ ಜಾಗಕ್ಕೆ ಬಂದು. ಅಳತೆ ಮಾಡಿಕೊಂಡು ಹೋಗಿದ್ದು, ಈ-ಖಾತಾ ಕೊಡುವಂತೆ ಹಲವಾರು ಬಾರಿ ಈಶ್ವರಪ್ಪ ರವರ ಹತ್ತಿರ ಕೇಳಿದಾಗ ಅವರು ದೂರುದಾರನಿಗೆ ಇ-ಖಾತಾವನ್ನು ಕೊಟ್ಟಿರುವುದಿಲ್ಲ.

ಡಿ.20 ರಂದು ಈಶ್ವರಪ್ಪ ದೂರುದಾರನ ಬಳಿ ಈ ಸ್ವತ್ತು ಮಾಡಿಕೊಡಲು 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ದೂರುದಾರ ಲಂಚದ ಹಣ ನೀಡಲು ಇಷ್ಟವಿಲ್ಲದೆ ಈಶ್ವರಪನವರ ವಿರುದ್ಧ ಕ್ರಮಕ್ಕಾಗಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಪ್ರಕರಣ ದಾಖಲಾಗಿ ಡಿ.24 ರಂದು ಬೆಳಿಗ್ಗೆ ಸೊರಬ ಪೋಸ್ಟ್ ಆಫೀಸ್ ಕಛೇರಿ ಬಳಿ ಅಪಾದಿತ ಅಧಿಕಾರಿ ದೂರುದಾರರಿಂದ 5 ಸಾವಿರ ಲಂಚದ ಹಣವನ್ನು ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಈ ಕಾರ್ಯಾಚರಣೆಯನ್ನು ಮಂಜುನಾಥ ಚೌದರಿ. ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ನೇತೃತ್ವದಲ್ಲಿ ನಡೆಸಲಾಗಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಹೆಚ್.ಎಸ್ ಸುರೇಶ್, ಸಿಬ್ಬಂದಿಯವರಾದ ಯೋಗೇಶ್ ಸಿ.ಹೆಚ್.ಸಿ, ಮಂಜುನಾಥ ಎಂ. ಸಿ.ಹೆಚ್.ಸಿ, ಸುರೇಂದ್ರ ಸಿ.ಹೆಚ್.ಸಿ, ಪ್ರಶಾಂತ್ ಕುಮಾರ್,ಹೆಚ್. ಸಿ.ಪಿ.ಸಿ. ಚೆನ್ನೇಶ್, ಸಿ.ಪಿ.ಸಿ ದೇವರಾಜ್, ಸಿ.ಪಿ.ಸಿ, ಅರುಣ್ ಕುಮಾರ್ ಯು.ಬಿ ಸಿ.ಪಿ.ಸಿ. ಅಂಜಲಿ, ಮ.ಪಿ.ಸಿ ಜಯಂತ್ ಎ.ಪಿ.ಸಿ ಮತ್ತು ಪ್ರದೀಪ್ ಎ.ಪಿ.ಸಿ. ರವರು ಪಾಲ್ಗೊಂಡಿರುತ್ತಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]