ರಿಪ್ಪನ್‌ಪೇಟೆ ; ಇಲ್ಲಿನ ಓಂ ಶ್ರೀಮಾತೃಶ್ರೀ ಸೇವಾ ಸಂಸ್ಥೆ (ರಿ) ಎನ್.ಜಿ.ಓ ಹಾಗೂ ಉಡುಪಿಯ ಆದರ್ಶ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 5 ರಂದು ಭಾನುವಾರ ತೀರ್ಥಹಳ್ಳಿ ರಸ್ತೆಯಲ್ಲಿರುವ ಮೇರಿಮಾತಾ ಪ್ರೌಢಶಾಲೆ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಜ್ಞ ವೈದ್ಯರುಗಳ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದು ಓಂ ಶ್ರೀಮಾತೃಶ್ರೀ ಸೇವಾ ಸಂಸ್ಥೆ ಎನ್.ಜಿ.ಓ ಅಧ್ಯಕ್ಷೆ ಲೇಖನ ನಾಯ್ಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದ ಸಕ್ಕರೆ ಅಂಶದ ಪರೀಕ್ಷೆ, ಇ.ಸಿಜಿ. ಕೊಬ್ಬಿನಾಂಶ, ಕಣ್ಣಿನ ತಪಾಸಣೆಯನ್ನು ಜನರಲ್ ಮೆಡಿಸನ್ ವಿಭಾಗದ ತಜ್ಞ ವೈದ್ಯಾಧಿಕಾರಿಗಳಾದ ಡಾ. ಜಿ.ಎಸ್. ಚಂದ್ರಶೇಖರ್, ಡಾ.ಉದಯಕುಮಾರ್ ಪ್ರಭು, ಡಾ.ಸುದೀಪಶೆಟ್ಟಿ ಹಾಗೂ ಮೂಳೆ ಮತ್ತು ಕೀಲು ರೋಗ ವಿಭಾಗದ ತಜ್ಞವೈದ್ಯರಾದ ಡಾ.ಮೋಹನ್‌ದಾಸ್ ಶೆಟ್ಟಿ, ಶಸ್ತ್ರ ಚಿಕಿತ್ಸಾ ವಿಭಾಗ ಡಾ.ಪ್ರಶಾಂತ್‌ಶೆಟ್ಟಿ, ಇ.ಎನ್.ಟಿ.ವಿಭಾಗದಿಂದ ಡಾ.ಭಾಸ್ಕರ್ ಎಂ.ಎನ್, ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ ಡಾ.ದಮಯಂತಿ, ಚರ್ಮರೋಗ ವಿಭಾಗ ಡಾ.ಅರುಣ್‌ಶೆಟ್ಟಿ ಕೆ., ನರರೋಗ ಶಸ್ತ್ರ ಚಿಕಿತ್ಸಾ ವಿಭಾಗ ಡಾ.ರಾಜೇಶ್‌ನಾಯರ್, ಹೃದ್ರೋಗ ವಿಭಾಗ ಡಾ.ಸುಹಾಸ್ ಜಿ.ಸಿ. ತೆರೆದ ಹೃದಯ ಮತ್ತು ರಕ್ತನಾಳ ಶಸ್ತ್ರ ಚಿಕಿತ್ಸಾ ವಿಭಾಗ ಡಾ.ಗುರುಪ್ರಸಾದ್ ಡಿ.ರೈ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗ ಡಾ.ಆನಂತ್ ಎಸ್, ನವಜಾತ ಶಿಶು ಮತ್ತು ಮಕ್ಕಳ ವಿಭಾಗ ಡಾ.ಗುರುಪ್ರಸಾದ್ ಶೆಟ್ಟಿ, ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗ ಡಾ.ಹರ್ಷ ಅಚಾರ್ಯ ಭಾಗವಹಿಸಿ ತಪಾಸಣೆ ನಡೆಸುವರು.
ಹೆಚ್ಚಿನ ಮಾಹಿತಿಗಾಗಿ 7795032349, 9972432170, 7795381279, 919740709029, 9739630219, 9632527622 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಲೇಖನ ನಾಯ್ಕ್ ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





