ರಿಪ್ಪನ್‌ಪೇಟೆ: ಆನಂದಪುರದ ಶ್ರೀ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದಲ್ಲಿ ಡಿಸೆಂಬರ್ 8 ರಂದು ಶರಣ ಸಾಹಿತ್ಯ ಸಮ್ಮೇಳನ, 1177ನೇ ಶಿವಾನುಭವ ಗೋಷ್ಠಿ ಹಾಗೂ ಉಚಿತ ಸಮಗ್ರ ಆರೋಗ್ಯ, ಕಣ್ಣು-ಹೃದಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಅಂದು ಸಂಜೆ 4 ಗಂಟೆಗೆ ಭಾವೈಕ್ಯ ಸಮ್ಮೇಳನ, ಕಂಚಿನ ರಥ ದೀಪೋತ್ಸವ ಹಾಗೂ ಹೂವಿನ ಪಲ್ಲಕ್ಕಿ ಮಹೋತ್ಸವವೂ ಜರುಗಲಿದೆ ಎಂದು ದೀಪೋತ್ಸವ ಸಮಿತಿಯ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪಗೌಡ ಹಾರೋಹಿತ್ತಲು ಮಾಹಿತಿ ನೀಡಿದ್ದಾರೆ.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.
ಬೆಳಗಿನ ಧಾರ್ಮಿಕ ಕಾರ್ಯಕ್ರಮಗಳು:
ಡಿಸೆಂಬರ್ 8 ರ ಮುಂಜಾನೆ ಲೋಕಕಲ್ಯಾಣಾರ್ಥವಾಗಿ ಕರ್ತೃ ಜಗದ್ಗುರು ಶ್ರೀ ಮುರುಘಾರಾಜೇಂದ್ರ ಗದ್ದುಗೆಗೆ ಶತರುದ್ರಾಭಿಷೇಕ ಹಾಗೂ ವಿಶೇಷ ಮಹಾಪೂಜೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ತಿಪ್ಪಾಯಿಕೊಪ್ಪ ಮೂಕಪ್ಪಸ್ವಾಮಿ ಮಠದ ಶ್ರೀ ಮಹಾಂತ ಸ್ವಾಮೀಜಿ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಸಾಹಿತ್ಯ ಸಮ್ಮೇಳನ ಮತ್ತು ಆರೋಗ್ಯ ಶಿಬಿರ:
ಶ್ರೀ ಮಠದ ಪೀಠಾಧಿಪತಿಗಳಾದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಶರಣ ಸಾಹಿತ್ಯ ಸಮ್ಮೇಳನ ಹಾಗೂ 1177ನೇ ಶಿವಾನುಭವ ಗೋಷ್ಠಿಯನ್ನು ಬೀದರ್ ಭಾಲ್ಕಿ ನಿರಂಜನ ಸಂಸ್ಥಾನ ಮಠದ ಜಗದ್ಗುರು ಡಾ. ಗುರುಬಸವ ಮಹಾಸ್ವಾಮೀಜಿ ಉದ್ಘಾಟಿಸಲಿದ್ದು, ಶಿರಾಳಕೊಪ್ಪ ವಿರಕ್ತಮಠದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಯೋಜಿಸಿರುವ ಬೃಹತ್ ಆರೋಗ್ಯ, ಕಣ್ಣು-ಹೃದಯ ತಪಾಸಣಾ ಹಾಗೂ ರಕ್ತದಾನ ಶಿಬಿರಕ್ಕೆ ಶಿವಮೊಗ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ್ ಹಿಂಡಸಘಟ್ಟ ಚಾಲನೆ ನೀಡಲಿದ್ದಾರೆ.
ಸಂಜೆ ಭಾವೈಕ್ಯ ಸಮ್ಮೇಳನ ಮತ್ತು ರಥೋತ್ಸವ:
ಸಂಜೆ 4 ಗಂಟೆಗೆ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಭಾವೈಕ್ಯ ಸಮ್ಮೇಳನ ನಡೆಯಲಿದೆ. ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು, ವಿವಿಧ ಮಠಾಧೀಶರು, ಕವಿಗಳು ಹಾಗೂ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಬಳಿಕ ಕಂಚಿನ ರಥ ದೀಪೋತ್ಸವ ಹಾಗೂ ಹೂವಿನ ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ದೀಪೋತ್ಸವ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಕರ್ಣೇಶ್, ಎಂ.ಎಸ್. ಹರೀಶ್‌ಗೌಡ ಸುಳಗೋಡು, ಕೋಶಾಧ್ಯಕ್ಷ ಯೋಗೇಶ್‌ಗೌಡ ಶಿವಗಂಗೆ, ಪೂಜಾ ಸಮಿತಿ ಅಧ್ಯಕ್ಷ ಡಾ. ಸಿ. ರೇಣುಕಾರಾಧ್ಯ ಹಾಗೂ ದಾಸೋಹ ಸಮಿತಿ ಅಧ್ಯಕ್ಷ ಎಸ್.ಟಿ. ಸುನೀಲ್ ಲಕ್ಕವಳ್ಳಿ ಉಪಸ್ಥಿತರಿದ್ದರು.
