ಲಂಚ ಪಡೆದು ಕಛೇರಿಗೆ ಅಲೆಸುತ್ತಾರೆಂಬ ದೂರು, ಕಂದಾಯ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ

Written by malnadtimes.com

Published on:

RIPPONPETE ; ಕೆರೆಹಳ್ಳಿ ಹೋಬಳಿ ಕಛೇರಿಯಲ್ಲಿ ಕಂದಾಯ ಅಧಿಕಾರಿಗಳು ಲಂಚಕ್ಕೆ ಡಿಮ್ಯಾಂಡ್ ಮಾಡುತ್ತಾರೆ ಮತ್ತು ಕಛೇರಿಗೆ ಅಲೆಯುವಂತೆ ಮಾಡುತ್ತಾರೆಂಬ ಸಾರ್ವಜನಿಕರ ದೂರುಗಳಿವೆ ಎಂದು ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ಇತರ ಅಧಿಕಾರಿಗಳಿಗೆ ಇನ್ಮುಂದೆ ಈ ರೀತಿಯಲ್ಲಿ ಸಾರ್ವಜನಿಕರ ದೂರುಗಳು ಬಂದರೆ ಅಮಾನತುಗೊಳಿಸುವಂತೆ ಸೂಚಿಸಲಾಗುವುದೆಂದು ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಖಡಕ್ ವಾರ್ನಿಂಗ್ ಮಾಡಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ನಾಡಕಛೇರಿಯ ಅಧಿಕಾರಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸಿ ಇತ್ತೀಚೆಗೆ ಪತ್ರಿಕೆಯೊಂದಲ್ಲಿ ಬಂದಂತಹ ಸುದ್ದಿಯನ್ನು ನೋಡಿದ್ದು ಅಲ್ಲದೆ ಸಾರ್ವಜನಿಕರ ದೂರುಗಳಿದ್ದು ಇದು ಹೀಗೆ ಮುಂದುವರಿದರೆ ನಿಮ್ಮಗಳನ್ನು ಅಮಾನತು ಪಡಿಸಬೇಕಾಗುವುದೆಂದು ಶಾಸಕರು ಖಡಕ್ ವಾರ್ನಿಂಗ್ ಮಾಡಿ, ದಾಖಲೆ ಪತ್ರಕ್ಕಾಗಿ ಬರುವಂತವರನ್ನು ಪದೇ ಪದೇ ಅಲೆಸಬೇಡಿ ಆದಷ್ಟು ಬೇಗ ದೂರದಿಂದ ಬರುವ ರೈತರು, ವಿದ್ಯಾರ್ಥಿಗಳಿಗೆ ಮತ್ತು ವೃದ್ದರಿಗೆ ಹಾಗೂ ಅಂಗವಿಕಲರಿಗೆ ಕೂಡಲೇ ಸ್ಪಂದಿಸಿ ಅವರ ಕೆಲಸ ಕಾರ್ಯಗಳನ್ನು ಮುಗಿಸಿ ಕಳುಹಿಸುವಂತೆ ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಬೇಳೂರು ಅವರನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.

ಗ್ರಾಮಾಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಎನ್.ಚಂದ್ರೇಶ್, ಆಶೀಫ್‌ಭಾಷಾ, ಡಿ.ಈ.ಮಧುಸೂದನ್, ಗಣಪತಿ ಗವಟೂರು, ಪ್ರಕಾಶ ಪಾಲೇಕರ್, ನಿರೂಪ್‌ಕುಮಾರ್, ಸಾರಾಭಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪ, ಪಕ್ಷದ ಮುಖಂಡರಾದ ಬಂಡಿ ರಾಮಚಂದ್ರ, ಶ್ವೇತಾ ಆರ್ ಬಂಡಿ, ಉಂಡಗೋಡು ನಾಗಪ್ಪ, ಕೆರೆಹಳ್ಳಿ ರವೀಂದ್ರ, ರಮೇಶ್ ಫ್ಯಾನ್ಸಿ, ಸಣ್ಣಕ್ಕಿ ಮಂಜು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಧುಶ್ರೀ, ಗಣಕಯಂತ್ರದ ಸಿಬ್ಬಂದಿ ಲಕ್ಷ್ಮಿದೇವಿ, ಭೂದೇವಿ ಇನ್ನಿತರರು ಹಾಜರಿದ್ದರು.


ಹಿಂದೂ ಮಹಾಸಭಾ ಗಣಪತಿಗೆ ಬೇಳೂರುರಿಂದ ವಿಶೇಷ ಪೂಜೆ

RIPPONPETE ; ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಟಾಪಿಸಲಾಗಿರುವ ಗಣಪತಿಗೆ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಸಮಿತಿಯ ಎಂ.ಬಿ.ಮಂಜುನಾಥ, ಸುಧೀಂದ್ರ ಪೂಜಾರಿ, ಬೇಕರಿ ನಾರಾಯಣ,ಶ್ರೀನಿವಾಸ ಆಚಾರ್, ಧನಲಕ್ಷ್ಮಿ, ದಿವಾಕರ್,ಬಂಡಿ ರಾಮಚಂದ್ರ, ರವೀಂದ್ರ ಕೆರೆಹಳ್ಳಿ, ಶ್ವೇತಾ ಆರ್ ಬಂಡಿ, ಡಿ.ಈ.ಮಧುಸೂಧನ್, ರಮೇಶ ಪ್ಯಾನ್ಸಿ, ಸಾರಾಭಿ, ಹೆಚ್.ವಿ.ಈಶ್ವರಪ್ಪಗೌಡ, ಪ್ರಕಾಶ ಪಾಲೇಕರ್, ಜಿ.ಆರ್.ಗೋಪಾಲಕೃಷ್ಣ, ಸಣ್ಣಕ್ಕಿ ಮಂಜು, ಆರ್.ಈ.ಭಾಸ್ಕರ್, ಹೆಚ್.ಎನ್.ಉಮೇಶ್, ನಾಗರಾಜ ಕೆದಲುಗುಡ್ಡೆ, ಅಶೋಕ ಹಾಲುಗುಡ್ಡೆ, ಇನ್ನಿತರರು ಪಾಲ್ಗೊಂಡಿದ್ದರು.

Leave a Comment