ರಿಪ್ಪನ್‌ಪೇಟೆ ; ಆನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಇಂದು ಮುರುಘಾಮಠದ ಉತ್ತರಾಧಿಕಾರಿಗಳು ಉನ್ನತ ಅಧ್ಯಯನಕ್ಕಾಗಿ ಶಿವಯೋಗ ಮಂದಿರದ ಗುರುಕುಲಕ್ಕೆ ಜಿಲ್ಲೆಯ ವೀರಶೈವ ಲಿಂಗಾಯಿತ ಮಠಾಧೀಶರ ಪರಿಷತ್‌ನವರ ಸಮ್ಮುಖದಲ್ಲಿ ಸಂಪ್ರದಾಯದಂತೆ ಉತ್ತರಾಧಿಕಾರಿಗಳನ್ನು ಬಿಡಲಾಯಿತು.
ಆನಂದಪುರ ಮುರುಘಾರಾಜೇಂದ್ರ ಮಠದ ಪೀಠಾಧ್ಯಕ್ಷರಾಗಿರುವ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿಯವರಿಗೆ 75 ವರ್ಷವಾಗುತ್ತಿದ್ದು ಮುಂದೆ ಮಠದ ಅಭಿವೃದ್ದಿ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವಂತಹ ಮತ್ತು ವಾಗ್ಮಿ ಸಮಾಜದ ಸಂಘಟನೆಯೊಂದಿಗೆ ಧರ್ಮಪ್ರಚಾರದಲ್ಲಿ ನನಗಿಂತ ಹೆಚ್ಚು ಅನುಭವ ಹೊಂದಿರುವಂತಹ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ ಅವರಿಗೆ ವೀರಶೈವ ಲಿಂಗಾಯಿತ ಪರಂಪರೆ ಸಂಪ್ರದಾಯ ಮತ್ತು ಪೂಜಾ ವಿಧಿವಿಧಾನಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಶಿವಯೋಗ ಮಂದಿರದ ಶಾಲೆಯಲ್ಲಿ ಸಂಸ್ಕೃತ ವೇದಾಧ್ಯಯನಕ್ಕಾಗಿ ಉತ್ತರಾಧಿಕಾರಿಗಳನ್ನು ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರುಗಳು ನಿಡಸೂಸಿಯ ಜಗದ್ಗುರುಗಳು ಹಾರನಹಳ್ಳಿ ಕೂಡಿ ಮಠದ ಶ್ರೀಗಳು ಹಾಗೂ ಗದುಗಿನ ತೋಂಟದಾರ್ಯ ಮಠದ ಜಗದ್ಗುರುಗಳು ಸೇರಿದಂತೆ ಶಿವಮೊಗ್ಗ ಜಿಲ್ಲಾ ಮಠಾಧೀಶರ ಪರಿಷತ್‌ನ ಮಠಾಧೀಶರುಗಳು ಮತ್ತು ಭಕ್ತ ಸಮೂಹ ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.