ತೀರ್ಥಹಳ್ಳಿ: ಮುಜರಾಯಿ ಇಲಾಖೆಯ ‘ಬಿ’ ಶ್ರೇಣಿಗೆ ಒಳಪಟ್ಟಿರುವ ತಾಲೂಕಿನ ಪ್ರಸಿದ್ಧ ಮೃಗವಧೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಲಂ 25ರನ್ವಯ ಈ ಸಮಿತಿಯನ್ನು ರಚಿಸಲಾಗಿದ್ದು, ಒಟ್ಟು 09 ಸದಸ್ಯರನ್ನು ನೇಮಕ ಮಾಡಲಾಗಿದೆ.
ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರು:
- ಪ್ರಧಾನ ಅರ್ಚಕರು (ಪದನಿಮಿತ್ತ ಸದಸ್ಯರು)
- ರವಿಕುಮಾರ್ ಜೆ.ಎಸ್. (ಜೋಗಿಮಾದ್ಲು)
- ನಾಗರತ್ನ ಕೆ.ಟಿ. (ಕೊಳಗಿ)
- ವೀಣಾ
- ಸತೀಶ ಕೆ.ಜಿ. (ಕಾನುಕೊಪ್ಪ)
- ಪ್ರಶಾಂತ ಕುಮಾರ್ (ಕುಪ್ಪಳಿ, ಅಂಗಳಗೊಡಿಗೆ ಗ್ರಾಮ)
- ಪಣಿರಾಜ್ ಬಿ.ಎಸ್. (ಬಂಕೇರಿ)
- ಆದಿತ್ಯ ಶಂಕರ್ ಎ.ಯು. (ಅರಮನೆಕೇರಿ)
- ಪ್ರಫುಲ್ಲಚಂದ್ರ ಎಸ್.ಆರ್. (ಶೇಡ್ಗಾರು)

ದೇವಸ್ಥಾನದ ಆಡಳಿತ ಸುಸೂತ್ರವಾಗಿ ನಡೆಯಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈ 9 ಜನರ ಸಮಿತಿಯನ್ನು ರಚಿಸಲಾಗಿದ್ದು, ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

