SSLC ಫಲಿತಾಂಶ ಪ್ರಗತಿಗೆ ಶಾಲೆಗಳಿಗೆ ಅಧಿಕಾರಿಗಳು ಭೇಟಿ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಮುಂಬರುವ ಮಾರ್ಚ್‌ನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ಶೇ. 100 ರಷ್ಟು ಫಲಿತಾಂಶ ಗಳಿಸುವ ಬಗ್ಗೆ ಎಲ್ಲಾ ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾ ಪಂಚಾಯಿತ್ ಉಪಕಾರ್ಯದರ್ಶಿ ಅನ್ನಪೂರ್ಣ ಶಾಲಾ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕ ಸಮೂಹಕ್ಕೆ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯ ಸರ್ಕಾರಿ ಪ್ರೌಢಶಾಲೆಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತ್ ಉಪಕಾರ್ಯದರ್ಶಿ ಅನ್ನಪೂರ್ಣ ಬುಧವಾರ ದಿಢೀರ್ ಭೇಟಿ 2025-2026ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ಬಗ್ಗೆ ಎಸ್.ಡಿ.ಎಂ.ಸಿ.ಮತ್ತು ಶಿಕ್ಷಕರ ಹಾಗೂ ತರಗತಿಯಲ್ಲಿ ಸಮಾಲೋಚನೆ ನಡೆಸಿ ಪ್ರತಿ ವಿದ್ಯಾರ್ಥಿಯನ್ನು ಕಲಿಕೆಯಲ್ಲಿ ತೊಡಗಿಸಿ ಪ್ರತಿ ಶಿಕ್ಷಕರನ್ನು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ನಡೆಸುವ ಮೂಲಕ ಮಾರ್ಗದರ್ಶನ ನೀಡಲು ಯೋಚಿಸಲಾಗಿದೆ ಮುಖ್ಯ ಶಿಕ್ಷಕರು ವಿಶೇಷ ಶಿಕ್ಷಕರು ಪ್ರಯತ್ನದೊಂದಿಗೆ ಉತ್ತಮ ಫಲಿತಾಂಶಕ್ಕಾಗಿ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದ್ದು ಈ ಬಗ್ಗೆ ಚಿಂತನೆ ಮಾಡಲಾಗಿದೆ ಎಂದರು.

ನಂತರ ಪಕ್ಕದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ಸ್ವಚ್ಚತೆ ಹಾಗೂ ಆಡುಗೆ ರುಚಿ ಶುಚಿಯ ಕುರಿತು ಮಾಹಿತಿ ಪಡೆಯುವದರೊಂದಿಗೆ ಸರ್ಕಾರದಿಂದ ನೀಡಲಾಗುವ ಎಲ್ಲಾ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುತ್ತಿವೆ ಎಂಬುದರ ಬಗ್ಗೆ ಮಕ್ಕಳ ಬಳಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ, ತಾಲ್ಲೂಕ್ ಪಂಚಾಯಿತ್ ಪ್ರಭಾರಿ ಇಓ ನರೇಂದ್ರಕುಮಾರ್, ಉಪಪ್ರಾಚಾರ್ಯ ಕೆಸವಿನ ಮನೆ ರತ್ನಾಕರ್, ಇಸಿಓ ಕರಿಬಸಪ್ಪ, ಸಿಬ್ಬಂದಿ ವರ್ಗ ಹಾಜರಿದ್ದರು.

Leave a Comment