ಜನಿವಾರ ಪ್ರಕರಣ ; ಕೆಇಎಯಿಂದ ಬಹಿರಂಗ ಕ್ಷಮೆಗೆ ಪ್ರೀತಮ್ ಹೆಬ್ಬಾರ್ ಆಗ್ರಹ

Written by malnadtimes.com

Published on:

ಕಳಸ ; ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷಾ ವೇಳೆ ಶಿವಮೊಗ್ಗದ ಆದಿಚುಂಚನಗಿರಿ ಪಿಯು ಕಾಲೇಜು ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿ ಮೂವರು ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಹೇಳಿದ್ದು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ದೊಡ್ಡ ಅವಮಾನವಾಗಿದ್ದು ಈ ಬಗ್ಗೆ ಕೆಇಎ ಕೂಡ ಬಹಿರಂಗವಾಗಿ ಕ್ಷಮೆ ಕೇಳುವುದರ ಜೊತೆಗೆ ಪರೀಕ್ಷೆಯಿಂದ ವಂಚಿತವಾಗಿರುವ ವಿದ್ಯಾರ್ಥಿಗೆ ಮರು ಪರೀಕ್ಷೆ ನಡೆಸಬೇಕೆಂದು ಬ್ರಾಹ್ಮಣ ಸಮುದಾಯದ ಮುಖಂಡ ಪ್ರೀತಮ್ ಹೆಬ್ಬಾರ್ ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಇಎ ಸಿಇಟಿ ಪರೀಕ್ಷೆಗೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಜನಿವಾರ ಮತ್ತು ಕಾಶಿದಾರ ತೆಗೆದು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಬೇಕೆಂಬ ಯಾವುದೇ ಸೂಚನೆ ಕೂಡ ಇರಲಿಲ್ಲ, ಆದರೆ ಹೋಮ್ ಗಾರ್ಡ್‌ಗಳು ಒತ್ತಾಯ ಪೂರ್ವಕವಾಗಿ ಜನಿವಾರ ಮತ್ತು ಕಾಶಿದಾರ ತೆಗೆಸಿ ಕಸದ ಬುಟ್ಟಿಗೆ ಎಸೆದಿರುವುದರಿಂದ ಇಡೀ ನಮ್ಮ ಸಮಾಜ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣಮಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕೇವಲ ಹೋಮ್ ಗಾರ್ಡ್‌ಗಳನ್ನು ವಜಾಗೊಳಿಸಿರುವುದು ಈ ಪ್ರಕರಣಕ್ಕೆ ಕೇವಲ ತೆರೆ ಎಳೆಯುವ ಕೆಲಸವಾಗಿದ್ದು ಇದನ್ನು ಇಷ್ಟಕ್ಕೆ ನಮ್ಮ ಸಮಾಜ ಬಿಡುವುದಿಲ್ಲ ಈ ಬಗ್ಗೆ ಕೆಇಎ ಕೂಡ ಬಹಿರಂಗ ಕ್ಷಮೆ ಕೇಳಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕೆಂದು ಪ್ರೀತಮ್ ಹೆಬ್ಬಾರ್ ಒತ್ತಾಯಿಸಿದ್ದಾರೆ.

Leave a Comment