ಪಿಯು ರಿಸಲ್ಟ್ ; ರಿಪ್ಪನ್‌ಪೇಟೆ ಸರ್ಕಾರಿ ಕಾಲೇಜ್‌ಗೆ ಶೇ.92 ಫಲಿತಾಂಶ

Written by Mahesha Hindlemane

Published on:

ರಿಪ್ಪನ್‌ಪೇಟೆ ; ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಇಂದು ಪ್ರಕಟವಾಗಿದ್ದು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇ. 92 ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಕೃಷ್ಣಮೂರ್ತಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪರೀಕ್ಷೆಗೆ 239 ವಿದ್ಯಾರ್ಥಿಗಳು ಕುಳಿತ್ತಿದ್ದು 220 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 65 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 46 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಉತ್ತೀರ್ಣಾರಾಗಿದ್ದಾರೆ. ದಿವ್ಯಶ್ರೀ (569) ಅಂಕ ಗಳಿಸಿದರೆ, ಭೂಮಿಕಾ ಬಿ.ಕೆ.(568) ಹಾಗೂ ರಕ್ಷಿತಾ ಯಲ್ಲಪ್ಪ ಛಲವಾದಿ (548) ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 10 ಡಿಸ್ಟಿಂಕ್ಷನ್‌ನಲ್ಲಿ 57 ಪ್ರಥಮ ದರ್ಜೆಯಲ್ಲಿ ವೀಣಾ ಕೆ.ಈ (571) ಪೂರ್ಣಿಕಾ ಕೆ.ಜೆ. (564) ಮತ್ತು ಸುಚಿತ್ರಾ ಎಂ (556) ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ.

ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 10 ಡಿಸ್ಟಿಂಕ್ಷನ್, 44 ಪ್ರಥಮ ಸ್ಥಾನದಲ್ಲಿ ಅಂದರೆ ಅನುಪಮಾ ಈ (559) ಮತ್ತು ಸಚಿನ್ ಎನ್.ಎಸ್ (558) ಉಷಾ ಎಸ್.ಜಿ.(537) ಅಂಕ ಗಳಿಸುವುದರೊಂದಿಗೆ ಉತ್ತೀರ್ಣಾರಾಗಿ ಕಾಲೇಜ್‌ನ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಪ್ರಾಚಾರ್ಯ ಕೃಷ್ಣಮೂರ್ತಿ ತಿಳಿಸಿ, ಉಪನ್ಯಾಸಕರ, ಪೋಷಕ ವರ್ಗದ ಪರಿಶ್ರಮಕ್ಕೆ ಅಭಿನಂದಿಸಿದ್ದಾರೆ.

Leave a Comment