ಶಿವಮೊಗ್ಗ

RAINFALL : ಸೊರಬದ ಉಳವಿಯಲ್ಲಿ 116.6 ಮಿ.ಮೀ. ಭಾರಿ ಮಳೆ

ಇತ್ತೀಚಿನ ದಿನಗಳಲ್ಲಿ ತಾಪಮಾನದಿಂದ ಕಂಗೆಟ್ಟಿದ್ದ ಜನತೆಗೆ ಮಳೆ ಕೊಂಚ ನಿರಾಳತೆ ತಂದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ: ಹೊಸನಗರದ ನಗರದಲ್ಲಿ 261 ಮಿ.ಮೀ. ಮಳೆ ದಾಖಲು – rain report shivamogga

ಶಿವಮೊಗ್ಗ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದ್ದು, ಹಲವೆಡೆ ಭೂಮಿ ತಂಪಾಗಿದೆ. ಇಂದು (ಅ.04) ಬೆಳಗ್ಗೆ 7 ಗಂಟೆಗೆ ಅಂತ್ಯಗೊಂಡಂತೆ ದಾಖಲಾಗಿರುವ ಮಳೆಯ ಅಂಕಿ-ಅಂಶಗಳ ಪ್ರಕಾರ, ಸೊರಬ ತಾಲೂಕಿನ ಉಳವಿಯಲ್ಲಿ ಗರಿಷ್ಠ 116.6 ಮಿ.ಮೀ. ಮಳೆ ಸುರಿದಿದೆ.

WhatsApp Group Join Now
Telegram Group Join Now
Instagram Group Join Now

ಸೊರಬ ತಾಲೂಕಿನ ಉಳವಿ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಉಳವಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಸುರಿದಿದೆ. ಸಾಗರ ತಾಲೂಕಿನ ಹಲವು ಪ್ರದೇಶಗಳಲ್ಲಿಯೂ ಮಳೆಯಾಗಿದ್ದು, ಹಿರೆನೆಲ್ಲೂರಿನಲ್ಲಿ 29 ಮಿ.ಮೀ., ಹಿರೆಬಿಳಗುಂಜಿಯಲ್ಲಿ 26 ಮಿ.ಮೀ. ಹಾಗೂ ಸಾಗರದಲ್ಲಿ 19.6 ಮಿ.ಮೀ. ಮಳೆ ದಾಖಲಾಗಿದೆ.

ಶಿಕಾರಿಪುರ ತಾಲೂಕಿನ ಹಿರೆಜಂಬೂರಿನಲ್ಲಿ 8.5 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ತಾಪಮಾನದಿಂದ ಕಂಗೆಟ್ಟಿದ್ದ ಜನತೆಗೆ ಮಳೆ ಕೊಂಚ ನಿರಾಳತೆ ತಂದಿದೆ. ಮಳೆಯ ಪರಿಣಾಮ ವಾತಾವರಣ ತಂಪಾಗಿದ್ದು, ಕೃಷಿ ಚಟುವಟಿಕೆಗಳಿಗೂ ಪೂರಕ ವಾತಾವರಣ ನಿರ್ಮಾಣವಾಗಿದೆ.

ತಾಲೂಕುವಾರು ಮಳೆಯ ವಿವರ :

ಸೊರಬ ತಾಲೂಕು:

  • ಉಳವಿ – 116.6 ಮಿ.ಮೀ.
  • ದೂಗೂರು – 13.25 ಮಿ.ಮೀ.
  • ಹೆಗ್ಗೋಡು – 13.0 ಮಿ.ಮೀ.
  • ಅಂಡಿಗೆ – 12.25 ಮಿ.ಮೀ.
  • ಹೊಸಬಾಳೆ – 9.0 ಮಿ.ಮೀ.

ಸಾಗರ ತಾಲೂಕು:

  • ಹೀರೆನೆಲ್ಲೂರು – 29.0 ಮಿ.ಮೀ.
  • ಹಿರೆಬಿಳಗುಂಜಿ – 26.0 ಮಿ.ಮೀ.
  • ಸಾಗರ – 19.6 ಮಿ.ಮೀ.
  • ತಾಳಗುಪ್ಪ – 10.75 ಮಿ.ಮೀ.
  • ಭೀಮನಕೋಣೆ – 10.5 ಮಿ.ಮೀ.
  • ತ್ಯಾಗರ್ತಿ – 9.5 ಮಿ.ಮೀ.
  • ಕಲ್ಮನೆ – 9.0 ಮಿ.ಮೀ.
  • ಮಸೂರು – 9.0 ಮಿ.ಮೀ.

ಶಿಕಾರಿಪುರ ತಾಲೂಕು:

  • ಹಿರೆಜಂಬೂರು – 8.5 ಮಿ.ಮೀ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!