ಮಹಾಶಿವರಾತ್ರಿ ಅಂಗವಾಗಿ ಫೆ.15 ಮತ್ತು 16 ರಂದು ಗುಳಿಗುಳಿ ಶಂಕರದಲ್ಲಿ ಧಾರ್ಮಿಕ ಕಾರ್ಯಕ್ರಮ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಸಮೀಪದ ಇತಿಹಾಸ ಪ್ರಸಿದ್ದ ಗುಳಿಗುಳಿಶಂಕರದ ಶ್ರೀಶಂಕರೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 15 ಮತ್ತು 16 ರಂದು ಶ್ರೀಶಂಕರೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ರುದ್ರಾಭಿಷೇಕ-ಕುಂಭಾಬಿಷೇಕ ರುದ್ರಹೋಮ ಸಾಮೂಹಿಕ ಸತ್ಯನಾರಾಯಣವ್ರತ ಹಾಗೂ ಯಕ್ಷಗಾನ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಆಧ್ಯಕ್ಷ ವಾಸುಶೆಟ್ಟಿ ಹಾಗೂ ಅವಡೆ ಶಿವಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಫೆಬ್ರವರಿ 15 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಹಂದಲಸೆ ರಾಘವೇಂದ್ರ ಭಟ್ಟ್ ನೇತೃತ್ವದಲ್ಲಿ ಶ್ರೀಶಂಕರೇಶ್ವರ ಸ್ವಾಮಿ ಸನ್ನಿಧಾನದಲ್ಲಿ ರುದ್ರಹೋಮ ಕುಂಭಾಬಿಷೇಕ ಹಾಗೂ ಮಹಾಪೂಜೆ ರಾತ್ರಿ 10 ಗಂಟೆಗೆ ಶಾಂತಪುರ ಕೃಷ್ಣಮೂರ್ತಿಭಟ್ ನೇತೃತ್ವದಲ್ಲಿ ಶ್ರೀಶಂಕರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಕಾರ್ಯಕ್ರಮ ನಂತರ ಹಾಲಾಡಿ ಶ್ರೀಕ್ಷೇತ್ರ ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಮಡಳಿ ಇವರಿಂದ ಪಂಜರಪಕ್ಷಿ ಹಾಗೂ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನದೊಂದಿಗೆ ಶಿವರಾತ್ರಿ ಜಾಗರಣೆ ನಡೆಯಲಿದೆ.

ಫೆಬ್ರವರಿ 16 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ವ್ರತ ಹಾಗೂ ಶ್ರೀಶಂಕರೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಪೂಜೆ ಮಹಾಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.
ಸುತ್ತಮುತ್ತಲಿನ ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನಾಶೀರ್ವಾದ ಪಡೆಯುವಂತೆ ತಿಳಿಸಿದರು.

Leave a Comment