THIRTHAHALLI ; ಬಾವಿಗೆ ಬಿದ್ದಿದ್ದ ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ತಾಲೂಕಿನ ಕುಡುಮಲ್ಲಿಗೆಯಲ್ಲಿ ನಡೆದಿದೆ.
![](https://malnadtimes.com/wp-content/uploads/2024/10/img-20241005-wa00726117661206607187180.jpg)
ಇಂದು ಮಧ್ಯಾಹ್ನ ಇಂದಿರಾನಗರದ ಚೌಡಿಕಟ್ಟಿ ಹತ್ತಿರದ ಸರ್ಕಾರಿ ಬಾವಿಗೆ ಗುಲಾಬಿ ಪೂಜಾರ್ತಿ (58) ಎಂಬ ಮಹಿಳೆ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದಿದ್ದು ವಿಷಯ ತಿಳಿದು ತೀರ್ಥಹಳ್ಳಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
![](https://malnadtimes.com/wp-content/uploads/2024/10/inshot_20241007_2310539613067508371122732592-1024x579.jpg)
ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಂತೋಷ್ ಶೆಟ್ಟಿ, ಚಾಲಕರಾದ ಪ್ರಶಾಂತ್ ಕುಮಾರ್ ಹಾಗೂ ಶರತ್ ಎಂ, ಶಶಿಕುಮಾರ್, ನಿಂಗಪ್ಪ ಇಟ್ಟಣ್ಣನವರ್ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಗುಲಾಬಿ ಪೂಜಾರ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.