ರಿಪ್ಪನ್‌ಪೇಟೆ ; ಯುಗಾದಿ ಹಬ್ಬಕ್ಕೆ ಖರೀದಿ ಜೋರು

Written by malnadtimes.com

Published on:

ರಿಪ್ಪನ್‌ಪೇಟೆ ; ಯುಗಾದಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬದ ನಿಮಿತ್ತ ರಿಪ್ಪನ್‌ಪೇಟೆಯ ಸಂತೆ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಬಲು ಜೋರಾಗಿ ಸಾಗಿತ್ತು.
ತರಕಾರಿ, ದಿನಸಿ ಬೆಲೆ ಗಗನಕ್ಕೇರಿದ್ದು ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದರರು.

WhatsApp Group Join Now
Telegram Group Join Now
Instagram Group Join Now

ಬೆಲೆ ಏರಿಕೆ ನಡುವೆಯೂ ಹಬ್ಬದ ಸಿದ್ದತೆ ಮಾತ್ರ ಜೋರಾಗಿಯೇ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಶನಿವಾರ ಜನಜಂಗುಲಿ ತುಂಬಿ ತುಳುಕುತ್ತಿದ್ದು ಕಂಡುಬಂತು. ಇಲ್ಲಿನ ವಿನಾಯಕ ವೃತ್ತದಲ್ಲಿನ ದಿನಸಿ, ಬಟ್ಟೆ, ತರಕಾರಿ ಅಂಗಡಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗ್ರಾಹಕರುಗಳ ಸಂಖ್ಯೆ ಹೆಚ್ಚಾಗಿತ್ತು.

ಹಿಂದೂಗಳಿಗೆ ಯುಗಾದಿ ಹಬ್ಬ ಬಂದರೆ, ಮುಸ್ಲಿಂ ಜನಾಂಗಕ್ಕೆ ರಂಜಾನ್ ಹಬ್ಬ ಸಹ ಸೋಮವಾರ ಬಂದಿರುವುದರಿಂದ ಎಲ್ಲೆಡೆ ದಿನಸಿ ಮತ್ತು ಬಟ್ಟೆ ಹಾಗೂ ಮಾಲ್‌ಗಳಲ್ಲಿ ಜನಜಂಗುಳಿ ತುಂಬಿ ತುಳುಕುವಂತಾಗಿದೆ.

ಹೂವು, ಹಣ್ಣಿನ ದರ ಸಹ ಏರಿಕೆಯಾಗಿದ್ದರೂ ಕೂಡಾ ಜನರು ಹಬ್ಬಕ್ಕಾಗಿ ಎಷ್ಟು ಹಣವಾದರೂ ಕೊಳ್ಳುವುದನ್ನು ಬಿಡಲು ಬರುತ್ತದೂ ಎಂದು ಹೇಳಿ ಖರೀದಿಯಲ್ಲಿ ಮಗ್ನರಾಗಿದ್ದರು.

ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳಾದ ಸೇಬು, ದ್ರಾಕ್ಷಿ, ನಿಂಬೆ, ಬಾಳೆಹಣ್ಣು, ಹೀಗೆ ಬಗೆಬಗೆಯ ಹಣ್ಣುಗಳನ್ನು ಕೊಳ್ಳಲು ಹಾಗೂ ಬಟ್ಟೆ ಅಂಗಡಿಯಲ್ಲಿ ಜನಜಾತ್ರೆಯೇ ಸೇರಿತ್ತು‌.

Leave a Comment