ಹೊಸನಗರ

ಮುರುಘಾಮಠದ ಕಾರ್ತಿಕ ದೀಪೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಹೆಚ್.ವಿ. ಈಶ್ವರಪ್ಪಗೌಡ

A new committee has been formed in connection with the Karthika Deepotsava, which is set to take place at the Murugharajendra Samsthana Matha on December 8th.

Murughamatt Deeposthsava

ರಿಪ್ಪನ್‌ಪೇಟೆ: ಮುರುಘಾರಾಜೇಂದ್ರ ಸಂಸ್ಥಾನ ಮಠದಲ್ಲಿ ಮುಂಬರುವ ಡಿಸೆಂಬರ್ 8ರಂದು ಜರುಗಲಿರುವ ಕಾರ್ತಿಕ ದೀಪೋತ್ಸವದ ಹಿನ್ನೆಲೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಶ್ರೀ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಮಾಜ ಬಾಂಧವರ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ದೀಪೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಹಾರೋಹಿತ್ತಲು ಹೆಚ್.ವಿ. ಈಶ್ವರಪ್ಪಗೌಡ ಹಾಗೂ ಕಾರ್ಯದರ್ಶಿಗಳಾಗಿ ಹರೀಶ್ ಮತ್ತು ಡಿ.ಎಸ್. ಕರುಣೇಶ್ವರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, “ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಸಮಾಜ ಬಾಂಧವರು ಉಳಿಸಿ ಬೆಳೆಸಿಕೊಂಡು ಹೋಗುವುದು ಇಂದಿನ ತುರ್ತು ಅಗತ್ಯವಾಗಿದೆ. ದೇಶದಲ್ಲಿ ನೆಲೆಸಿರುವ ಅಶಾಂತಿ ಹಾಗೂ ಅಜಾಗರೂಕತೆಯನ್ನು ನಿವಾರಿಸಲು ನಾವೆಲ್ಲರೂ ಸಂಘಟಿತರಾಗಬೇಕಿದೆ” ಎಂದು ತಿಳಿಸಿದರು.

ಮಳೆ ಹಾಗೂ ಪರಿಸರದ ಕುರಿತು ಮಾತನಾಡಿದ ಶ್ರೀಗಳು, “ಮಲೆನಾಡಿನಲ್ಲಿಯೇ ಮಳೆಯಾಗದೆ ಬರದ ಛಾಯೆ ಆವರಿಸಿರುವುದನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಆದರೂ, ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ-ಕಟ್ಟೆಗಳು ತುಂಬಿದ್ದು, ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಒಣಗುತ್ತಿದ್ದ ಭತ್ತದ ಗದ್ದೆಗಳಿಗೆ ಈ ಮಳೆಯು ಜೀವ ನೀಡಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ. ಮನುಷ್ಯನ ದುರಾಸೆಯಿಂದಾಗಿ ಇಂದು ಅರಣ್ಯ ಹಾಗೂ ಪರಿಸರ ನಾಶವಾಗುತ್ತಿದ್ದು, ಇದರಿಂದಾಗಿ ಮುಂದೆ ಘೋರ ಪರಿಣಾಮಗಳನ್ನು ಎದುರಿಸಬೇಕಾದ ಕಾಲ ಬರಲಿದೆ. ಆದ್ದರಿಂದ, ಪ್ರಕೃತಿಯನ್ನು ಉಳಿಸಿ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪಗೌಡ ಹಾರೋಹಿತ್ತಲು, ಕಾರ್ಯದರ್ಶಿ ಡಿ.ಎಸ್. ಕರುಣೇಶ್ವರ, ನಿಕಟಪೂರ್ವ ಅಧ್ಯಕ್ಷ ವಿಜಯಕುಮಾರ್, ಕೋಶಾಧ್ಯಕ್ಷ ಹಾಗೂ ಶ್ರೀ ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಎಂ.ಆರ್. ಶಾಂತವೀರಪ್ಪಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಉಮೇಶ್, ಚಿತ್ರಟ್ಟೆಮಠದ ಲಿಂಗರಾಜ್ ಸ್ವಾಮಿ, ಜೆ.ಎಸ್. ಚಂದ್ರಪ್ಪ, ಬಸನಕೊಪ್ಪದ ನಿಜಲಿಂಗಪ್ಪ, ಡಿ.ಈ. ಮಧುಸೂದನ್, ಹಾಲುಗುಡ್ಡೆಯ ಹೆಚ್.ಎಸ್. ರವಿ, ನೆವಟೂರಿನ ದೇವೇಂದ್ರಪ್ಪಗೌಡ, ಸಚಿನ್‌ಗೌಡ, ಕೆರೆಹಿತ್ತಲಿನ ಗಿರೀಶ್, ಚನ್ನಕೊಪ್ಪದ ರಾಜು, ಸೋಮಶೇಖರ ದೂನ, ಕೊಳವಳ್ಳಿಯ ಕೆ.ಬಿ. ರಮೇಶ್, ಗವಟೂರಿನ ಜಿ.ಡಿ. ಮಲ್ಲಿಕಾರ್ಜುನ ಹಾಗೂ ಗಿಳಾಲಗುಂಡಿಯ ರಾಜೇಂದ್ರ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!