ಹೊಸನಗರ

ಹೊಸಬೀಡು ಗಂಗಾಧರೇಶ್ವರ ದೇವಸ್ಥಾನದಲ್ಲಿ ಜ. 31ರಂದು ಷಡಾಧಾರಾ ಪ್ರತಿಷ್ಟೆ ಕಾರ್ಯಕ್ರಮ

ಹೊಸನಗರ ; ತಾಲ್ಲೂಕಿನ ಚಕ್ರಾನಗರ ಹೊಸಬೀಡು ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಜ. 31ರ ಶುಕ್ರವಾರ ಷಡಾಧಾರ (ನಿಧಿಕುಂಭ ಸ್ಥಾಪನೆ) ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಗಂಗಾಧರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಉದಯ ಕೊಠಾರಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮವು ಜ. 31ರ ಶುಕ್ರವಾರ ಬೆಳಿಗ್ಗೆ ಕ್ಷೇತ್ರ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ|| ಶ್ರೀ ಸಿದ್ಧರಾಜು ಸ್ವಾಮಿಗಳವರ ಸಾರಥ್ಯದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು ಬೆಳಿಗ್ಗೆ 9 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು 12 ಗಂಟೆಗೆ ಮಹಾಮಂಗಳಾರತಿ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ದೇವಸ್ಥಾನದ ಭಕ್ತಾರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.

ಸಮಿತಿಯ ಗೌರವಾಧ್ಯಕ್ಷ ಟಾಕಪ್ಪ ಗೌಡ ಮಾತನಾಡಿ, ದೇವಸ್ಥಾನದ ಪೂರ್ಣ ನಿರ್ಮಾಣಕ್ಕೆ ಸುಮಾರು 2.50 ಕೋಟಿ ರೂ. ಬೇಕಾಗಿದ್ದು ಈಗಾಗಲೇ ಸಾಕಷ್ಟು ಭಕ್ತಾಧಿಗಳನ್ನು ಸಂಪರ್ಕಿಸಲಾಗಿದ್ದು ಹಣ ನೀಡಲು ಕೆಲವು ದಾನಿಗಳು ಮುಂದೆ ಬಂದಿದ್ದಾರೆ. ದೇವಸ್ಥಾನದ ಭಕ್ತಾಧಿಗಳು ಅನೇಕ ಊರುಗಳಲ್ಲಿ ವಾಸವಾಗಿದ್ದು ಅವರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಒಂದು ಸುಂದರವಾದ ದೇವಸ್ಥಾನ ನಿರ್ಮಿಸಲು ಭಕ್ತಾದಿಗಳು ನಮೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೇಳಿಕೊಂಡರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮೂಲ ದೇವಸ್ಥಾನಕ್ಕೆ ಅಡಿಪಾಯ ಹಾಕಿರುವುದು

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಶೇಷಪ್ಪ ಮತ್ತು ಹೂವಪ್ಪ ಗೌಡ ಮತ್ತು ಇತರರು, ಪ್ರಧಾನ ಕಾರ್ಯದರ್ಶಿಯಾದ ಕಿರಣ್ ನಾಯ್ಕ್ ಹೊಸಬೀಡು, ಸಹ ಕಾರ್ಯದಶಿಯಾದ ಪ್ರವೀಣ್ ನಾಯ್ಕ್ ಸಂಘಟನಾ ಕಾರ್ಯದರ್ಶಿ ಸುರೇಶ್ ಗೌಡ, ರವಿ ಕೊಠಾರಿ, ಖಜಾಂಚಿ ಎಸ್.ಎಲ್ ನಾಗೇಶ್‌ಭಟ್, ಸಹ ಖಜಾಂಚಿ ರಾಜು ಹೆಚ್.ಆರ್, ಸಲಹೆಗಾರರಾದ ಹೆಚ್.ಪಿ ತಿಮ್ಮಪ್ಪ ಹಾಗೂ ಆನಂದ ಮೊಗವೀರ ದೇವಸ್ಥಾನ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!