ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮಾನತಿಗೆ ಬೇಳೂರು ಶಿಫಾರಸು

0 3,277

ರಿಪ್ಪನ್‌ಪೇಟೆ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದಿರುವುದು ಮತ್ತು ಯಾರು ಎಂ.ಎಲ್.ಎ ? ನಾನು ಸುಮಾರು ಜನ ನೋಡಿದ್ದೇನೆಂದು ಹೇಳುತ್ತಾರೆಂಬ ಸಾರ್ವಜನಿಕರ ದೂರಿನನ್ವಯ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ಈ ಸಂದರ್ಭದಲ್ಲಿ ಸಹ ವೈದ್ಯಾಧಿಕಾರಿ ಗೈರಾಗಿರುವುದನ್ನು ಕಂಡು ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಇಲ್ಲಿನ ವೈದ್ಯಾಧಿಕಾರಿಯನ್ನು ಅಮಾನತು ಪಡಿಸಿ ವರದಿ ನೀಡುವಂತೆ ಸೂಚಿಸಿದರು.


ಪ್ರಾಥಮಿಕ ಆರೋಗ್ಯ ಕೇಂದ್ರದ ಹಲವು ಸಮಸ್ಯೆಗಳ ಕುರಿತು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮತ್ತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿದ ಶಾಸಕ ಗೋಪಾಲಕೃಷ್ಣ ಬೇಳೂರು ತಕ್ಷಣ ಸಿಬ್ಬಂದಿಗಳನ್ನು ಕರೆಯಿಸಿ ಪ್ರತ್ಯೇಕವಾಗಿ ಸಮಸ್ಯೆಗಳ ಸಮಾಲೋಚನೆ ನಡೆಸುತ್ತಿದ್ದಂತೆ ಇಲಾಖೆಯ ಹಲವರು ಇಲ್ಲಿನ ಹೊರಗುತ್ತಿಗೆಯಿಂದ ಬಂದಿರುವ ಡಿ. ಗ್ರೂಪ್ ನೌಕರರಾದ ಸ್ವಾತಿಯನ್ನು ಕೂಡಲೇ ಬದಲಾಯಿಸಿ ಇಲ್ಲವೇ ನಮ್ಮಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿ ಸಾರ್ ಎಂದು ಸಿಬ್ಬಂದಿವರ್ಗ ಶಾಸಕರಲ್ಲಿ ಮನವಿ ಮಾಡಿದರು. ಆಗ ಶಾಸಕರು ಸ್ವಾತಿಯನ್ನು ಕರೆದು ‘ನೀನು ಕೆಲಸ ಮಾಡಲು ಬಂದಿದ್ದೀಯಾ ? ಆಥವಾ ರಾಜಕೀಯ ಮಾಡಲು ಬಂದಿದ್ದೀಯಾ ? ಎಂದು ಕೇಳಿ ನಿನಗೆ ಕೆಲಸ ಮಾಡುವ ಇಷ್ಟ ಇದ್ದರೆ ಇರು ಇಲ್ಲವಾದರೆ ಬೇರೆ ಕಡೆ ಹೋಗು’ ಎಂದು ಸೂಚಿಸಿ, ಇನ್ನೂ ಎರಡು ದಿನ ನಿನ್ನ ಕರ್ತವ್ಯದ ಬಗ್ಗೆ ನಿಗಾ ವಹಿಸಿ ವರದಿ ನೀಡುವಂತೆ ಸಿಬ್ಬಂದಿ ವರ್ಗಕ್ಕೆ ಸೂಚಿಸಿದರು.


ಅಲ್ಲದೇ ಫಾರ್ಮಾಸಿಸ್ಟ್ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಯಾವಾಗಲೂ ಬರುತ್ತಾರೆ ಸರಿಯಾಗಿ ಔಷಧ, ಮಾತ್ರೆ ವಿತರಣೆಯಾಗದೇ ರೋಗಿಗಳು ಖಾಸಗಿ ಮೆಡಿಕಲ್‌ಗಳಿಗೆ ಚೀಟಿ ಹಿಡಿದು ಹೋಗುವಂತಾಗಿದೆ ಎಂದು ಸಾರ್ವಜಿನಿಕರು ದೂರಿದರು. ಆಗ ಶಾಸಕರು ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸ್ಥಳೀಯ ಅಸ್ಪತ್ರೆಯ ಫಾರ್ಮಾಸಿಸ್ಟ್ ಸರಿಯಾಗಿ ಕೆಲಸಕ್ಕೆ ಬಾರದಿರುವುದರ ಬಗ್ಗೆ ಆತನ ಮೇಲೆ ಕ್ರಮ ಕೈಗೊಳ್ಳಿ ಎಂದು ಖಡಕ್ ವಾರ್ನ್ ಮಾಡಿದರು.


ಡಾ.ಅಂಜನಪ್ಪ, ಸಿಬ್ಬಂದಿಗಳಾದ ಗಾಯಿತ್ರಿ, ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ತಾ.ಪಂ.ಮಾಜಿ ಸದಸ್ಯ, ಚಂದ್ರಮೌಳಿಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಕೆಂಚನಾಲ ಗ್ರಾ.ಪಂ.ಅಧ್ಯಕ್ಷ ಉಭೇದುಲ್ಲಾ ಷರೀಪ್, ಆಶೀಫ್, ಗಣಪತಿ, ಪ್ರಕಾಶ್‌ಪಾಲೇಕರ್, ಉಲ್ಲಾಸ್, ಉಮಾಕರ, ಉಂಡಗೋಡು ನಾಗಪ್ಪ, ಶ್ರೀಧರ್, ರಮೇಶ್ ಫ್ಯಾನ್ಸಿ, ದಿವಾಕರ್ ಇನ್ನಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!