ಹೊಸನಗರ: ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ದತ್ತು ಶಾಲೆ ಪರವಾಗಿ ಹೇಳಿಕೆ ನೀಡಿರುವುದು ಬಾಲಿಶವಾಗಿದೆ. ಶಾಸಕರ ಮಾದರಿ ಶಾಲೆಯಾಗಿರುವ ಈ ಶಾಲೆಯ ಬಗ್ಗೆ ಈ ಸದಸ್ಯರಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಿನಿ ಕುಮಾರ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಲಂಕುಶವಾಗಿ ವಿವರಿಸಿ, ನಿನ್ನೆ ನಡೆದ ಪಟ್ಟಣ ಪಂಚಾಯತಿ ಸಭೆಯಲ್ಲಿ ಸದಸ್ಯರುಗಳ ಹೇಳಿಕೆಯನ್ನು ಕಂಡ ತುಂಡವಾಗಿ ತಿರಸ್ಕರಿಸಿದರು.
ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಅದ್ದೂರಿಯಾಗಿ ಶಾಲಾ ವಾರ್ಷಿಕೋತ್ಸವವನ್ನು ನಡೆಸಿದ್ದು ಪಟ್ಟಣದ ಜನರ ಮೆಚ್ಚುಗೆಯನ್ನು ಗಳಿಸಿದೆ. ಪಟ್ಟಣ ಪಂಚಾಯಿತಿ ಎಲ್ಲಾ ಚುನಾಯಿತ ಸದಸ್ಯರಿಗೂ ಶಾಲಾ ವಾರ್ಷಿಕೋತ್ಸವದ ಕರೆಯೋಲೆ ಪತ್ರಿಕೆಯನ್ನು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರುಗಳಿಂದ ತಲುಪಿಸಿದ್ದರು ಕೂಡ ಕೆಲ ಸದಸ್ಯರು ಸಭೆಯಲ್ಲಿ ಪತ್ರಿಕೆ ತಲುಪದ ಬಗ್ಗೆ ಆರೋಪ ಮಾಡಿದ್ದು ಸರಿಯಲ್ಲ. ಪಟ್ಟಣ ಪಂಚಾಯಿತಿಯ ಶಾಸಕರ ಮಾದರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದರು ಶಾಲೆಗೆ ಕಳಪೆ ಗುಣಮಟ್ಟದ ಬಣ್ಣ ಮಾಡಿಸುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ. ಈಗ ಕುಡಿಯುವ ನೀರಿಗೂಸಹ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಸರ್ಕಾರದ ಯಾವುದೇ ಅನು ದಾನವಿಲ್ಲದಿದ್ದರೂ ಸಾರ್ವಜನಿಕರ ಹಳೆ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿ ಸಮಿತಿಯವರು ಹಾಗೂ ಸಾರ್ವಜನಿಕರ ನೆರವಿನಿಂದ ಶಾಲೆಯ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯಲಾಗಿದೆ ಎಂದು ಅವರು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರೋಹಿಣಿ, ದೀಪಕ್ ಸ್ವರೂಪ್, ಸದಸ್ಯರುಗಳಾದ ಚಂದ್ರಶೇಖರ್, ಗೌತಮ್, ಸತ್ಯನಾರಾಯಣ, ನಾಸಿರ್, ಜಯಲಕ್ಷ್ಮಿ, ಮಂಜುನಾಥ್, ಶೈಲಜಾ, ಸತ್ಯನಾರಾಯಣ, ರೆಹಮದ್ ಫಯಾಜ್ ಉಪಸ್ಥಿತರಿದ್ದರು.