ಹೊಸನಗರ : ಪಟ್ಟಣದಲ್ಲಿ ಇತ್ತೀಚೆಗೆ ಹಲವಾರು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಈವರೆಗೆ ಯಾರನ್ನು ಬಂಧಿಸದ ಪೊಲೀಸರು ಇಂದು ಬೆಳಿಗ್ಗೆ ಬೀದಿ ಬಗೆಯ ಕಬಾಬ್ ಅಂಗಡಿ ಗಣೇಶನನ್ನು ಸಾರ್ವಜನಿಕರ ಸಹಾಯದಿಂದ ಬಂಧಿಸುವ ಮೂಲಕ ಪಟ್ಟಣದ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.
ಬೀದಿಬದಿಯಲ್ಲಿ ಕಬಾಬ್ ಅಂಗಡಿ ಇಟ್ಟುಕೊಂಡಿದ್ದ ಗಣೇಶ ಪ್ರತಿದಿನ ಸಹಸ್ರಾರು ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದರೂ ಕಳ್ಳತನಕ್ಕೆ ಯತ್ನಿಸಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸುತ್ತಿದೆ.
ಇವನು ಇತ್ತೀಚೆಗೆ ಪಟ್ಟಣದ ಫೈನಾನ್ಸ್ ಅಂಗಡಿಯೊಂದರಲ್ಲಿ ಲಕ್ಷಾಂತರ ರೂ. ದೋಚಿರುವುದು ತನಿಖೆ ವೇಳೆ ತಿಳಿದುಬಂದಿದೆ. ಇಂದು ಬೆಳಗಿನಜಾವ ಪಿಎಲ್‌ಡಿ ಬ್ಯಾಂಕ್‌ನ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸುವಾಗ ಸ್ಥಳೀಯರ ಕೈಗೆ ಈತ ಸಿಕ್ಕಿಬಿದ್ದಿದ್ದಾನೆ.
ಈತನ ಕಳ್ಳತನದ ಇನ್ನಷ್ಟು ಮಾಹಿತಿಗಾಗಿ ನಿರೀಕ್ಷಿಸಿ…..