ರಿಪ್ಪನ್‌ಪೇಟೆ ಬೃಂದಾವನ ಕ್ಯಾಂಟೀನ್‌ನಲ್ಲಿ ಬಿಸಿಬಿಸಿ ಬೋಂಡಾ, ಚುರುಮುರಿ ಸವಿದ ಗೀತಾಕ್ಕ-ಶಿವಣ್ಣ

ರಿಪ್ಪನ್‌ಪೇಟೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಕೊಲ್ಲೂರು – ಬೈಂದೂರು ತೆರಳುವ ಮಾರ್ಗದ ರಿಪ್ಪನ್‌ಪೇಟೆಯ ರಾಜ್ಯ ಹೆದ್ದಾರಿ ಪಕ್ಕದ ಬೃಂದಾವನ ಕ್ಯಾಂಟೀನ್‌ನಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಶಾಸಕ ಗೋಪಾಲಕೃಷ್ಣ ಬೇಳೂರರನ್ನು ಅಭಿಮಾನಿಗಳ ಕಾರ್ಯಕರ್ತರ ಸ್ವಾಗತಿಸಿ ಬರ ಮಾಡಿಕೊಂಡರು.

ನೃತರ ಬೃಂದಾವನ ಕ್ಯಾಂಟೀನ್‌ನಲ್ಲಿ ಬಿಸಿ ಬಿಸಿ ಮೆಣಸಿನಕಾಯಿ ಬೋಂಡಾ, ಚುರುಮುರಿ ಸವಿದು ಅಭಿಮಾನಿಗಳು, ಕಾರ್ಯಕರ್ತರನ್ನು ಹುರಿದುಂಬಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಗೆಲುವು ನಿಶ್ಚಿತವೆಂದು ಭವಿಷ್ಯ ನುಡಿದ ಅವರು, ಈಗಾಗಲೇ ರಾಜ್ಯ ಸರ್ಕಾರದದ ಗ್ಯಾರಂಟಿ ಯೋಜನೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಿಂದ ಮತದಾರರು ಕಾಂಗ್ರೆಸ್ ಕಡೆ ಹಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆಂಬ ಬಗ್ಗೆ ಭಾವನಾತ್ಮಕ ಅಭಿಪ್ರಾಯ ಕಂಡು ಬರುತ್ತಿದ್ದು, ಹಸಿದವರ ಬಗ್ಗೆ ಕಾಂಗ್ರೆಸ್ ಸದಾ ಸ್ಪಂದಿಸುತ್ತಿದೆ ಆದರೆ ಅಡಳಿತದಲ್ಲಿರುವ ಕೇಂದ್ರ ಮೋದಿ ಸರ್ಕಾರದಿಂದ ನಾವು ಮೋಸ ಹೋಗಿದ್ದು ಈ ದೇಶವನ್ನು ಸಂವೃದ್ದ ದೇಶವನ್ನಾಗಿ ಮತ್ತು ಶಾಂತಿ ಸಾಮರಸ್ಯದಿಂದರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಜಾತಿಯ ವಿಷ ಬೀಜ ಬಿತ್ತಿ ಗೊಂದಲ ಸೃಷ್ಠಿಸುವ ಕೋಮುವಾದಿ ಪಕ್ಷವನ್ನು ದೂರವಿಡಲು ಮತದಾರರು ಉತ್ಸುಕರಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನ ಗಳಿಸುವುದೆಂದು ಹೇಳಿ, ಕೇಂದ್ರದಲ್ಲಿ 360 ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಹ್ಯಾಟ್ರಿಕ್ ಹೀರೋ ಚಿತ್ರನಟ ಶಿವರಾಜ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಗ್ರಾಮ ಪಂಚಾಯ್ತಿ ಸದಸ್ಯ ಡಿ.ಈ.ಮಧುಸೂದನ್, ಮಂಜುನಾಥ ಮಳವಳ್ಳಿ,
ಬಂಡಿ ರಾಮಚಂದ್ರ, ಲೇಖನ, ರವೀಂದ್ರ, ಬೃಂದಾವನ ಕ್ಯಾಂಟೀನ್ ಮಾಲೀಕ ಸ್ವಾಮಿನಾಯ್ಕ್, ಕೆರೆಹಳ್ಳಿ, ರಮೇಶ್‌ ಫ್ಯಾನ್ಸಿ, ಹೆಚ್.ಎನ್. ಉಮೇಶ್, ಗಣಪತಿ ಗವಟೂರು, ಪ್ರಕಾಶಪಾಲೇಕರ್, ಆಸಿಫ್‌ಭಾಷಾ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

Malnad Times

Recent Posts

ಮತದಾನ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ : ರಶ್ಮಿ

ಹೊಸನಗರ: ಭಾರತ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಬೇಕು. ಮತದಾನ ಮಾಡುವುದು ಪ್ರತಿಯೊಬ್ಬ ದೇಶದ ಪ್ರಜೆಯ…

29 mins ago

Election Boycott |  ಲೋಕಸಭಾ ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಮಾಗಲು ಗ್ರಾಮಸ್ಥರು ! ಕಾರಣವೇನು ?

ಹೊಸನಗರ: ತಾಲ್ಲೂಕಿನ ನಗರ ಹೋಬಳಿಯ ಯಡೂರು ಗ್ರಾಪಂ ವ್ಯಾಪ್ತಿಯ ಕವರಿಯ ಮಾಗಲು ಗ್ರಾಮ ಮೂಲಭೂತ ಸೌಲಭ್ಯದಿಂಸಸಹ ದ ವಂಚಿತವಾಗಿದೆ ಎಂದು…

58 mins ago

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 75.02 ರಷ್ಟು ಮತದಾನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ…

8 hours ago

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

18 hours ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

24 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

1 day ago