Categories: ShikaripuraShivamogga

ಶಿಕಾರಿಪುರದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಫೆ.18 ರಂದು ಸಮಾವೇಶ ; ಕಲಗೋಡು ರತ್ನಾಕರ್

ಶಿಕಾರಿಪುರ : ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನ ಈಡೇರಿಸಿದ್ದು ತಾಲ್ಲೂಕಿನಲ್ಲಿಯೂ ಕೂಡ ಈ ಯೋಜನೆಯನ್ನ ಶೇ. 99 ಈಡೇರಿಸಿದ್ದು ಇನ್ನುಳಿದ ಶೇ.1 ಬಾಕಿ ಇದ್ದು, ಈ ಕುರಿತು ತಾಲ್ಲೂಕಿನಲ್ಲಿ ಫೆ. 18 ರಂದು ಪಟ್ಟಣದ ಆಡಳಿತ ಸೌಧದ ಹಿಂಭಾಗದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಯಾರು ಈ ಯೋಜನೆಗಳಿಂದ ವಂಚಿತರಾಗಿದ್ದಾರೋ ಅವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಎಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಅದ್ಯಕ್ಷ ಕಲಗೋಡು ರತ್ನಾಕರ್ ಕರೆ ನೀಡಿದರು. 

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪಕ್ಷ ಬೇದವಿಲ್ಲದೆ ಜಾತಿಭೇದವಿಲ್ಲದೆ ಧರ್ಮಭೇದವಿಲ್ಲದೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು ಇವುಗಳ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ರಾಜ್ಯದಾದ್ಯಂತ ಪ್ರತಿ ತಾಲ್ಲೂಕುಗಳಲ್ಲಿ  ಸಮಾವೇಶ ನಡೆಸುವುದರ ಮೂಲಕ ತಾಂತ್ರಿಕ ದೋಷಗಳಿಂದ ಗ್ಯಾರಂಟಿ ಯೋಜನೆಗೆ ಒಳಪಡುವಂತೆ ಮಾಡಲಾಗುವುದು. ಅಂತೆಯೇ ತಾಲ್ಲೂಕಿನಲ್ಲಿಯೂ ಕೂಡ ಈ ಯೋಜನೆಯನ್ನ ಶೇ. 99 ಈಡೇರಿಸಿದ್ದು ಇನ್ನುಳಿದ ಶೇ.1 ಬಾಕಿ ಇದ್ದು, ಈ ಕುರಿತು ಫೆ. 18 ರಂದು ಪಟ್ಟಣದ  ಆಡಳಿತ ಸೌಧದ ಹಿಂಭಾಗದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಯಾರು ಈ ಯೋಜನೆಗಳಿಂದ ವಂಚಿತರಾಗೀದ್ದಾರೋ ಅವರು ಆಗಮಿಸಿ ಕಾರ್ಯಕ್ರಮ ಯಶಸ್ಚಿಗೊಳಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡುತ್ತಾ, ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ 10,74,16,000 ರೂಪಾಯಿಗಳಷ್ಟು ಹಣ ಮಹಿಳೆಯರ ಖಾತೆಗೆ ಜಮವಾಗುತ್ತಿದ್ದು, ಗೃಹಜ್ಯೋತಿಯಡಿ 37,744 ಮನೆಗಳಿಗೆ ಉಚಿತ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಶಕ್ತಿ ಯೋಜನೆಯಡಿ, 12,74,688 ಜನ ಮಹಿಳೆಯರು ಈ ತಾಲ್ಲೂಕಿನ ಮಾರ್ಗವಾಗಿ ಸಂಚಾರ ಮಾಡಿದ್ದು, 5,41,9,935 ಮಹಿಳೆಯರು ತಾಲ್ಲೂಕಿನಿಂದ ಹೊರ ತಾಲ್ಲೂಕುಗಳಿಗೆ ಸಂಚಾರ ಮಾಡಿದ್ದು, ಉಚಿತ ಅಕ್ಕಿ ಯೋಜನೆಯಡಿ 55,947 ಕುಟುಂಬಗಳು ಉಚಿತ ಅಕ್ಕಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ನಿಕಟ ಪೂರ್ವ ಅಭ್ಯರ್ಥಿ ಹಾಗೂ ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಕಾಂಗ್ರೇಸ್ ಪಕ್ಷದ ಯೋಜನೆಯು ಜಾತ್ಯತೀತವಾಗಿ, ಪಕ್ಷಾತೀತವಾಗಿ ನೀಡಿದ್ದು, ಇದರ ಅತಿಹೆಚ್ಚಿನ ಲಾಭ ಪಡೆದುಕೊಂಡಿದ್ದು, ಈ ಯೋಜನೆಯ ವಿರುದ್ಧವಾಗಿ ಮಾತನಾಡುತ್ತಿರುವವರೆ ಬಿಜೆಪಿಗರೆ ಎಂದು ಲೇವಡಿ ಮಾಡಿದರು.

ಭದ್ರಕಾಡ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡುತ್ತಾ, ತಾಂತ್ರಿಕ ಕಾರಣದಿಂದಾಗಿ ಐದು ಯೋಜನೆಗಳ ಫಲಾನುಭವಿಗಳಿಗೆ ಅವಕಾಶ ಸಿಗದೇ ಇದ್ದವರಿಗಾಗಿ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು ಇದರ ಪ್ರಯೋಜನವನ್ನು ಅವಕಾಶ ವಂಚಿತ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ನಾಗರಾಜ್ ಗೌಡ, ಗೋಣಿ ಪ್ರಕಾಶ್, ಶಕುಂತಲಮ್ಮ,ಸೌಭಾಗ್ಯಮ್ಮ, ಜಯಶ್ರಿ, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕವಲಿ ಗಂಗಾಧರ್, ಮುಖಂಡರಾದ ಕೆ ಪಿ ರುದ್ರೇಗೌಡ, ಗಣಪತಿ, ಶಿವಾನಾಯ್ಕ್, ವೀರೇಶ್, ಲೋಕೇಶ್, ಚಂದ್ರಣ್ಣ, ಭಂಡಾರಿ ಮಾಲತೇಶ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ಕಾಂಗ್ರೆಸ್ ಪಕ್ಷ ನೀಡಿರುವ ಯೋಜನೆಗಳಿಂದ ಬಿಜೆಪಿ ಪಕ್ಷದವರಿಗೆ ಈಗಾಗಲೇ ಸೋಲಿನ ಭಯ ಹುಟ್ಟಿರುವಂತೆ ಕಾಣುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಮರಾಠ ಸಮಾಜದವರು ತಮ್ಮ ಆರಾಧ್ಯ ದೈವ ತುಳಜಾ ಭವಾನಿ ಹಾಗೂ ವಿವಿಧ ದೇವಸ್ಥಾನದ ಲೋಕಾರ್ಪಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮರಾಠ ಸಮಾಜದ ಮನೆ ಮನೆಗಳಿಗೆ ಮಹಿಳೆಯರಿಗೆ ಉಡಿ ನೀಡುವ ನೆಪದಲ್ಲಿ ಸೀರೆ ಅರಿಶಿಣ ಕುಂಕುಮ ಅಕ್ಷತೆ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ಕ್ಯಾಲೆಂಡರ್ ಕೊಟ್ಟು ಬರುತ್ತಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಬಿಜೆಪಿ ಮುಖಂಡರು ಇದೇ ರೀತಿ ಮುಂದುವರೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
– ಮಹೇಶ್ ಹುಲ್ಮಾರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ 

Malnad Times

Recent Posts

Arecanut Today Price | ಮೇ 5ರ ಅಡಿಕೆ ರೇಟ್

ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

13 hours ago

ಕಾಂಗ್ರೆಸ್ ಮೀಸಲಾತಿ ಜಾರಿಗೊಳಿಸಿದ್ದರಿಂದ ಕೆಳ ವರ್ಗದವರಿಗೂ ಸರ್ಕಾರಿ ಉದ್ಯೋಗ ಲಭಿಸಿದೆ ; ಬೇಳೂರು ಗೋಪಾಲಕೃಷ್ಣ

ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…

14 hours ago

ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರಿಂದ ಭರ್ಜರಿ ರೋಡ್ ಷೋ

ರಿಪ್ಪನ್‌ಪೇಟೆ : ನಾಡಿದ್ದು ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಇಂದು ಭರ್ಜರಿ…

14 hours ago

ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಹಸ್ತಕ್ಷೇಪವಿಲ್ಲ ; ಸುಧೀರ್‌ಕುಮಾರ್ ಮುರೊಳ್ಳಿ ಸ್ಪಷ್ಟನೆ

ಹೊಸನಗರ : ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಹಾಸನದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಅತ್ಯಂತ ಹೇಯವಾದದ್ದು. ಹೆಣ್ಣು ಮಕ್ಕಳ ಮಾನಹಾನಿಯಾಗುವಂತಹ…

17 hours ago

ಕಾಡಾನೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ನಿವಾಸಕ್ಕೆ ಬಿವೈಆರ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ರಿಪ್ಪನ್‌ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿದ್ದ ಮೃತಪಟ್ಟ ತಿಮ್ಮಪ್ಪ ನಿವಾಸಕ್ಕೆ…

19 hours ago

Shivamogga | ನಗರದಲ್ಲಿ ಗಮನ ಸೆಳೆದ ಮತದಾನ ಜಾಗೃತಿ ‘ಮ್ಯಾರಾಥಾನ್’

ಶಿವಮೊಗ್ಗ : ನಮ್ಮನ್ನು ಯಾರು ಆಳಬೇಕೆಂಬ ತೀರ್ಮಾನ ಮತದಾರರ ಕೈಯಲಿದೆ. ಆದ್ದರಿಂದ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ…

20 hours ago