Categories: Shivamogga

ಸನಾತನ ಧರ್ಮ | ಈಶ್ವರಪ್ಪ, ಜ್ಞಾನೇಂದ್ರ ಚರ್ಚೆಗೆ ಬರಲಿ ನಾನು ಸಿದ್ದ ; ಸವಾಲೆಸೆದ ಕಿಮ್ಮನೆ

ಶಿವಮೊಗ್ಗ : ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ಕೆ.ಎಸ್. ಈಶ್ವರಪ್ಪ (K.S Eshwarappa) ಮತ್ತು ಆರಗ ಜ್ಞಾನೇಂದ್ರ (Araga Jnanendra) ರವರು ಚರ್ಚೆಗೆ ಬರಲಿ ನಾನು ಸಿದ್ಧ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ (Kimmane Rathnakar) ಸವಾಲು ಹಾಕಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸನಾತನ ಧರ್ಮದ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ಹಲವು ಪುಸ್ತಕಗಳನ್ನು ಓದಿದ್ದೇನೆ. ಸನಾತನ ಧರ್ಮಕ್ಕೆ ನಿಘಂಟುವಿನಲ್ಲಿ ಏನು ಅರ್ಥವಿದೆ ಎಂದು ಗಮನಿಸಿದ್ದೇನೆ. ನಾನು ಯಾವತ್ತೂ ಸನಾತನ ಧರ್ಮದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಅಷ್ಟಕ್ಕೂ ಸನಾತನ ಧರ್ಮಕ್ಕೆ ಪ್ರತೇಕ ಕೃತಿಯೂ ಇಲ್ಲ. ಅದನ್ನು ಬರೆದವರು ಇಲ್ಲ. ಅನಾದಿಕಾಲದಿಂದ ಬಂದಿದ್ದನ್ನೆ ನಾವು ಸನಾತನ ಧರ್ಮ ಎಂದು ಹೇಳುತ್ತೇವೆ ಎಂದರು.

ವೇದ, ಉಪನಿಷತ್ತು, ಮನಸೃತಿ ಸೇರಿದರೆ ಸನಾತನ ಧರ್ಮವಾಗುತ್ತದೆ ಎನ್ನುವುದಾದರೆ ಅದರ ಆಚರಣೆಗಳೆಲ್ಲವೂ ನಿಜ ಎನ್ನುವುದಾದರೆ ಅಲ್ಲಿರುವ ನ್ಯೂನತೆ ಅಸಮಾನತೆಯನ್ನು ಪ್ರಶ್ನೆ ಮಾಡಬೇಕಲ್ಲವೇ. ನಾನು ಒಬ್ಬ ಹಿಂದೂನೇ ಮನುಷ್ಯತ್ವವನ್ನು ವಿರೋಧ ಮಾಡುವ ಯಾವ ಧರ್ಮವೂ ಶ್ರೇಷ್ಟವಲ್ಲ. ಎಲ್ಲಿ ನ್ಯೂನತೆ ಇದೆಯೂ ಅದನ್ನು ತೆಗೆದು ಹಾಕಬೇಕು ಎಂದಷ್ಟೇ ಹೇಳಿದ್ದೇನೆ. ಇದೇ ಕೆಲಸವನ್ನೇ ಗಾಂಧೀಜಿ, ಅಂಬೇಡ್ಕರ್, ಬಸವಣ್ಣ, ಬುದ್ಧ ಮುಂತಾದವರು ಮಾಡಿದ್ದಾರೆ
ಎಂದರು.

1926 ರಲ್ಲಿ ಸ್ಥಾಪನೆಯಾದ ಆರ್.ಎಸ್.ಎಸ್ ಇದುವರೆಗೂ ಹಿಂದೂ ಧರ್ಮ, ಸನಾತನ ಧರ್ಮದಲ್ಲಿನ ಮನುಷ್ಯ ವಿರೋಧಿ ವಿಚಾರಗಳನ್ನು ಸರಿಪಡಿಸಲು ಪ್ರಯತ್ನವನ್ನೆ ಮಾಡಿಲ್ಲ. ಒಂದೇ ಒಂದು ಕಾರ್ಯಕ್ರಮವನ್ನೂ ರೂಪಿಸಿಲ್ಲ. ಬದಲಾಗಿ ಒಂದು ಧರ್ಮವನ್ನು ಹೀಯಾಳಿಸುವ, ಪ್ರಚೋದಿಸುವ ಕೆಲಸವನ್ನು ಮಾಡಿಕೊಂಡು ಬಂದಿದೆ ಎಂದ ಅವರು, ಮನುಸ್ಮೃತಿಯನ್ನು ಅವರು ಬೇಕಾದರೆ ಎಲ್ಲಾ ಬಿಜೆಪಿ ಕಚೇರಿಯಲ್ಲಿ, ಆರ್‌ಎಸ್‌ಎಸ್ ಕಚೇರಿಗಳಲ್ಲಿ ಇಡಲಿ, ಆದರೆ ಅಂಬೇಡ್ಕರ್‌ರವರನ್ನು ಕೂಡ ಓದಲಿ ಎಂದು
ಸವಾಲು ಹಾಕಿದರು.

ಸೈದ್ಧಾಂತಿಕವಾಗಿ ನಾನು ಬಿಜೆಪಿಯನ್ನು ವಿರೋಧ ಮಾಡುತ್ತೇನೆ. ವೈಯುಕ್ತಿಕವಾಗಿನಾನು ಯಾರ ವಿರೋಧಿಯೂ ಅಲ್ಲ. ಬಿಜೆಪಿಯೊಂದಿಗೆ ಎಂದಿಗೂ ಹೊಂದಾಣಿಕೆಯನ್ನು ಮಾಡಿಕೊಂಡಿಲ್ಲ. ಹಾಗೆ ನೋಡಿದರೆ ದೇವಸ್ಥಾನಗಳಿಗೆ ಆರಗ ಜ್ಞಾನೇಂದ್ರರಿಗಿಂತ ಹೆಚ್ಚು ಹಣ ಕೊಟ್ಟವನೇ ನಾನು. ಸಾಹಿತ್ಯ ಪರಿಷತ್‌ಗೆ ಜಾಗ ಕೊಟ್ಟಿದ್ದು ನಾನು, ಈಗಿರುವಾಗ ನಾನು ಹಿಂದೂ ಧರ್ಮದ ವಿರೋಧಿ ಎಂದು ಹೇಗೆ ಹೇಳುತ್ತಾರೆ. ಆರ್‌ಎಸ್‌ಎಸ್ ರಾಮಸೇನೆ, ಬಿಜೆಪಿ ಇವೆಲ್ಲವೂ ಒಂದೇ ಸಂತಾನ
ಎಂದರು.

ಬಿಜೆಪಿಯವರು ಮುಸ್ಲಿಂ ವಿರುದ್ಧ ಮಾತನಾಡಿದರೆ ಮತ ಬರುತ್ತೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಸುಳ್ಳು. ಸಾರ್ವಕರ್ ಬಗ್ಗೆ ಮಾತನಾಡುವ ಅವರು ಅವರ ಕಟ್ಟಡದ ಕೆಳಗೆಯೇ ಗೂಡ್ಸ್ ವಾಸಿಸುತ್ತಾ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಹಿಂದೂ ಮಹಾಸಭಾದ ಅಧ್ಯಕ್ಷರೇ ಇವರಲ್ಲವೇ ಎಂದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ದ ಎಂದು ಮಾಜಿ ಸಚಿವ ಕಾಂಗ್ರೇಸ್ ಮುಖಂಡ ಕಿಮ್ಮನೆ ರತ್ನಾಕರ್ ಸ್ಪಷ್ಟಪಡಿಸಿದ ಅವರು, ನಾನಂತು ಆಕಾಂಕ್ಷಿಯಲ್ಲ ಅರ್ಜಿಯನ್ನೂ ಹಾಕಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಉಪಸ್ಥಿತರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago