Categories: Shivamogga

ಹೊಸ ಮುಖಕ್ಕೆ ಅವಕಾಶ ಕೊಡಲು ತೀರ್ಥಹಳ್ಳಿ ಜನರು ತೀರ್ಮಾನ ಮಾಡಿದ್ದಾರೆ ; ಯಡೂರು ರಾಜಾರಾಂ

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲಗೌಡರ ತತ್ವಸಿದ್ಧಾಂತಗಳ ಮೇಲೆ ರಾಜಕಾರಣ ಮಾಡುವ ಉದ್ದೇಶದಿಂದ ಈ ಬಾರಿ ಸ್ಪರ್ಧೆ ಮಾಡಿದ್ದು, ಮಾದರಿ ಕ್ಷೇತ್ರಕ್ಕಾಗಿ ಪಣತೊಟ್ಟಿದ್ದೇನೆ. ಬುದ್ದಿವಂತ ಮತಕ್ಷೇತ್ರದ ಜನರು ಘಟಾನುಘಟಿ ನಾಯಕರ ನಡುವೆ ಹೊಸ ಮುಖಕ್ಕೆ ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ಹೆಗ್ಡೆ ಹೇಳಿದರು.

ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು. ಭೌಗೋಳಿಕವಾಗಿ ವಿಸ್ತಾರವಾಗಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ವಿಭಿನ್ನ ಭಾಗದಲ್ಲಿ ವಿಭಿನ್ನ ಸಮಸ್ಯೆಗಳಿವೆ. ಪ್ರಮುಖ ವಾಣಿಜ್ಯಬೆಳೆಯಾದ ಅಡಕೆ ಈಗ ಸಂಕಷ್ಟದಲ್ಲಿದೆ. ದಿನಕ್ಕೊಂದು ರೋಗ ಮತ್ತು ಸರಕಾರದ ಪಾಲಿಸಿಗಳಿಂದ ಬೆಳೆಗಾರ ಆತಂಕದಲ್ಲಿದ್ದಾನೆ ಅವರಲ್ಲಿ ಆತ್ಮವಿಶ್ವಾಸ ತುಂಬುದ ಕೆಲಸ ಮಾಡಬೇಕಿದೆ ಎಂದರು.

ತೀರ್ಥಹಳ್ಳಿ ಕ್ಷೇತ್ರದ ಚಕ್ರಾ,ವರಾಹಿ ಹಾಗೂ ಶರಾವತಿ ಸಂತ್ರಸ್ತರ ಸಮಸ್ಯೆ ಇನ್ನೂ ಹಾಗೇ ಇದೆ. ವಿದ್ಯುತ್ ಯೋಜನೆಗಳಿಗೆ ಮನೆಮಠ ಕಳೆದುಕೊಂಡವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರಕಾರಗಳಿಗೆ ಆಗಿಲ್ಲ ಈ ಎಲ್ಲಾ ಸಮಸ್ಯೆಗಳ ಬಗ್ಗೆ ನನಗೆ ಅರಿವಿದ್ದು, ಆ ಜನರ ನಡುವೆ ಇದ್ದು ಬಗೆಹರಿಸುವೆ ಎಂದರು.

ಉದ್ಯೋಗ ಸೃಷ್ಠಿ:
ತೀರ್ಥಹಳ್ಳಿಯ ಯುವ ಜನರು ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಿದರೆ ನಮ್ಮ ಹುಡುಗರು ಬೇರೆ ಕಡೆ ಹೋಗುವುದು ತಪ್ಪುತ್ತದೆ. ಅಡಕೆ ಉತ್ಪನ್ನಗಳ ಕೈಗಾರಿಕೆ, ಗುಡಿಕೈಗಾರಿಕೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಇಲ್ಲಿಯೇ ಉದ್ಯೋಗ ಸೃಷ್ಟಿಮಾಡಿದರೆ ಯುವಜನರು ವಲಸೆ ತಪ್ಪುತ್ತದೆ. ಮಲೆನಾಡಿನಲ್ಲಿ ಈಗ ವೃದ್ಧ ದಂಪತಿಗಳು ಮಾತ್ರ ಇದ್ದು, ಅವರನ್ನು ನೋಡಿಕೊಳ್ಳಬೇಕಾದ ಮಕ್ಕಳು ಹೊಟ್ಟೆಪಾಡಿಗಾಗಿ ನಗರಗಳಿಗೆ ಹೋಗಿದ್ದಾರೆ. ಇದರಿಂದ ಮಲೆನಾಡಿನ ಸಂಸ್ಕೃತಿಯ ಮೇಲೆಯೇ ಪೆಟ್ಟು ಬಿದ್ದಿದೆ. ಆದ್ದರಿಂದ ಸ್ಥಳೀಯವಾಗಿ ಉದ್ಯಮ ಸೃಷ್ಟಿಗೆ ಆದ್ಯತೆ ನೀಡುವೆ ಎಂದು ಹೇಳಿದರು.

ಶಾಂತವೇರಿ ಗೋಪಾಲಗೌಡರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ತೀರ್ಥಹಳ್ಳಿ ಕ್ಷೇತ್ರದ ರಾಷ್ಟ್ರೀಯ ಪಕ್ಷಗಳ ಮುಖಂಡರು ಅವರ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ಹಣಬಲದ ಮೇಲೆ ರಾಜಕಾರಣಕ್ಕೆ ಮುಂದಾಗಿದ್ದಾರೆ. ಅವರ ನಡುವೆ ಹೊಸ ಮುಖಕ್ಕೆ ಅವಕಾಶ ಕೊಡಲು ತೀರ್ಥಹಳ್ಳಿಯ ಜನರು ತೀರ್ಮಾನ ಮಾಡಿದ್ದಾರೆ.

ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಎಂಬುದು ನೆರೆಯ ಕೇರಳ, ತಮಿಳುನಾಡು ,ಆಂಧ್ರಗಳಲ್ಲಿ ಸಾಬೀತಾಗಿದೆ. ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಕುಮಾರಣ್ಣ ಸರಕಾರದ ಯೋಜನೆಗಳು ನಮ್ಮ ಕೈ ಹಿಡಿಯಲಿವೆ ಎಂದರು.

ಯುವಕರ, ಕೃಷಿಕರ ಮತ್ತು ಸಾಮಾನ್ಯರ ಪ್ರತಿನಿಧಿಯಾಗಿರುವ ನನಗೆ ಈ ಬಾರಿ ತೀರ್ಥಹಳ್ಳಿ ಕ್ಷೇತ್ರದ ಮತದಾರರು ಕೈಹಿಡಿಯಲಿದ್ದಾರೆ.ಮಾದರಿ ಕ್ಷೇತ್ರಕ್ಕಾಗಿ ನನ್ನನ್ನು ಬೆಂಬಲಿಸಲಿದ್ದಾರೆ ಎಂದು ರಾಜಾರಾಂ ಹೇಳಿದರು. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು.

Malnad Times

Recent Posts

ದತ್ತಪೀಠದಲ್ಲಿ ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿದ ಪ್ರವಾಸಿ ಬಸ್ ! ಬಾಲಕ ಸಾವು

ಚಿಕ್ಕಮಗಳೂರು: ದತ್ತಪೀಠದಿಂದ ಮಾಣಿಕ್ಯಾಧಾರಕ್ಕೆ ತೆರಳುತ್ತಿದ ಪ್ರವಾಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿ ಬಿದ್ದು, ಆರು…

2 hours ago

ರಂಭಾಪುರಿ ಶ್ರೀಗಳ ಮೇ ತಿಂಗಳ ಪ್ರವಾಸ ಕಾರ್ಯಕ್ರಮ ವಿವರ

ಎನ್.ಆರ್.ಪುರ : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಮೇ ತಿಂಗಳ ಪ್ರವಾಸ…

3 hours ago

Arecanut Today Price | ಏಪ್ರಿಲ್ 28ರ ಅಡಿಕೆ ರೇಟ್

ತೀರ್ಥಹಳ್ಳಿ : ಏ. 28 ಭಾನುವಾರ ಗುರುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

4 hours ago

ಮತದಾನ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ : ರಶ್ಮಿ

ಹೊಸನಗರ: ಭಾರತ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಬೇಕು. ಮತದಾನ ಮಾಡುವುದು ಪ್ರತಿಯೊಬ್ಬ ದೇಶದ ಪ್ರಜೆಯ…

7 hours ago

Election Boycott |  ಲೋಕಸಭಾ ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಮಾಗಲು ಗ್ರಾಮಸ್ಥರು ! ಕಾರಣವೇನು ?

ಹೊಸನಗರ: ತಾಲ್ಲೂಕಿನ ನಗರ ಹೋಬಳಿಯ ಯಡೂರು ಗ್ರಾಪಂ ವ್ಯಾಪ್ತಿಯ ಕವರಿಯ ಮಾಗಲು ಗ್ರಾಮ ಮೂಲಭೂತ ಸೌಲಭ್ಯದಿಂಸಸಹ ದ ವಂಚಿತವಾಗಿದೆ ಎಂದು…

7 hours ago

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 75.02 ರಷ್ಟು ಮತದಾನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ…

14 hours ago