ಓಮ್ನಿ ಮತ್ತು ಬೈಕ್ ನಡುವೆ ಅಪಘಾತ, ಸವಾರ ಸ್ಥಳದಲ್ಲೇ ಸಾವು !

Written by malnadtimes.com

Published on:

SHIVAMOGGA | ಮಾರುತಿ ಓಮ್ನಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿಟ್ಟೂರಿನ ಬಳಿ ಸಂಭವಿಸಿದೆ.

WhatsApp Group Join Now
Telegram Group Join Now
Instagram Group Join Now

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ‌ ಕೊಡತಾಳು ಗ್ರಾಮದ ಜಗದೀಶ್ (30) ಮೃತ ದುರ್ಧೈವಿ. ಈತ ಹಾರನಹಳ್ಳಿಯ ಬ್ಯಾಂಕ್‌ಗೆ ಹೋಗಿ ಬರುವುದಾಗಿ‌ ತನ್ನ ಕೆಎ‌17ಹೆಚ್ಇ8581 ನಂಬರಿನ ಬೈಕಿನಲ್ಲಿ ಹೊರಟಿದ್ದು ಸವಳಂಗ ರಸ್ತೆಯಿಂದ ಹಾರನಹಳ್ಳಿ ಗ್ರಾಮದ ಕಡೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಕೆಎ19ಎಂಎಫ್2851 ನಂಬರಿನ ಓಮ್ನಿ ವಾಹನ ಡಿಕ್ಕಿ ಹೊಡೆದಿದ್ದು ಜಗದೀಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

HOSANAGARA | ಕಂದಕಕ್ಕೆ ಬಿದ್ದ ಸರ್ಕಾರಿ ಬಸ್, ಪ್ರಯಾಣಿಕರಿಗೆ ಗಾಯ !

Gruhalakshmi | 11 & 12ನೇ ಕಂತಿನ ಹಣ ಕೂಡಲೇ ಬರಲಿದೆ ನಿಮ್ಮ ಅಕೌಂಟ್ ಚೆಕ್ ಮಾಡಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಪತ್ರಕರ್ತ ಎಸ್.ಜಿ.ರಂಗನಾಥ !

Leave a Comment