ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸಿಗಂದೂರು ಸೇತುವೆಯ ಭಾಗದಲ್ಲಿ ಪ್ರವಾಸಿಗನೊಬ್ಬ ಗೇಟ್ ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಸಿದ ಘಟನೆ ನಡೆದಿದೆ.
ಧಾರವಾಡ ಮೂಲದ ವ್ಯಕ್ತಿಯೊಬ್ಬನು ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಸಿಗಂದೂರಿಗೆ ಪ್ರವಾಸಕ್ಕೆ ಬಂದಿದ್ದ. ಗೇಟ್ ಬಳಿ ವಾಹನಗಳನ್ನು ಸರದಿಯಲ್ಲಿ ಬಿಡುವ ವಿಚಾರದಲ್ಲಿ ಗೇಟ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಆತ ತನ್ನ ಕಾರಿನಿಂದ ಮಚ್ಚು ತೆಗೆದು ತೋರಿಸಿ ಬೆದರಿಸಿರುವ ಘಟನೆ ನಡೆದಿದೆ.
ತಕ್ಷಣ ಗೇಟ್ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿತ ಪ್ರವಾಸಿಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆದರೆ ಗೇಟ್ ಸಿಬ್ಬಂದಿಯಿಂದ ಲಿಖಿತ ದೂರು ಸಲ್ಲಿಸಲ್ಪಡದ ಹಿನ್ನೆಲೆಯಲ್ಲಿ, ಪೊಲೀಸರು ಪ್ರವಾಸಿಗನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
Read More
Adhaar Card : 3 ದಿನಗಳಲ್ಲಿ ಈ ಕೆಲಸ ಮಾಡಿ ಇಲ್ಲವಾದಲ್ಲಿ ಪಾವತಿಸಬೇಕು ಇಷ್ಟು ಹಣ !

