ಮಾ. 2 ರಂದು  ರಿಪ್ಪನ್‌ಪೇಟೆಯಲ್ಲಿ ರಾಜ್ಯ ಮಟ್ಟದ ಗಾಯನ ಸ್ಪರ್ಧೆ

Written by malnadtimes.com

Published on:

ರಿಪ್ಪನ್‌ಪೇಟೆ ; ದಿ.ಪುನೀತ್ ರಾಜ್‌ಕುಮಾರ್ ಇವರ ಜನ್ಮದಿನಾಚರಣೆ ಅಂಗವಾಗಿ ಸುಧಾಗೌಡ ಅರ್ಪಿಸುವ ಮಲೆನಾಡು ಗಾನಸುಧೆ ರಾಜ್ಯಮಟ್ಟದ ಗಾಯನ ಸ್ಪರ್ಧೆ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಮಾ. 2 ರಂದು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಭಾ ಭವನದಲ್ಲಿ  ರಾಜ್ಯಮಟ್ಟದ ಗಾಯನಸ್ಪರ್ಧೆ ಆಯೋಜಿಸಲಾಗಿದೆ ಎಂದು ಸುಧಾಗೌಡ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು.  ಸಮಾರಂಭದ ಅಧ್ಯಕ್ಷತೆಯನ್ನು ಸುಧಾಗೌಡ ವಹಿಸುವರು.

ಮುಖ್ಯ ಆತಿಥಿಗಳಾಗಿ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ನಿಯಮದ ಅಧ್ಯಕ್ಷ ಶಾಸಕ ಗೋಪಾಲಕೃಷ್ಣ ಬೇಳೂರು, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಹರತಾಳು ಹಾಲಪ್ಪ, ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಹೆಚ್.ಆರ್. ಬೆಂಗಳೂರು ಹ್ಯೂಮನ್ ರೈಟ್ಸ್ ಸ್ಪೇಟ್ ಡೆಪ್ಯೂಟಿ ಡೈರೆಕ್ಟರ್ ಹೆಚ್.ಸಿ.ಪುಷ್ಪಲತಾ, ರಾಜ್ಯ ಬಿಜೆಪಿ ಮುಖಂಡ ರಾಜಾನಂದಿನಿ, ಇನ್ನಿತರ ಹಲವು ಗಣ್ಯರು ಭಾಗವಹಿಸುವರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಗಗನ್‌ಗೌಡ, ನೇರಲುಮನೆ ಕಮಲಮ್ಮ, ಮುತ್ತಪ್ಪ ನೇರಲಮನೆ ಇವರನ್ನು ಸನ್ಮಾನಿಸಲಾಗುವುದು ಎಂದರು.


ಫೆ. 17 ರಂದು ರಿಪ್ಪನ್‌ಪೇಟೆಯಲ್ಲಿ ಸೌಹಾರ್ದ ಸಹಕಾರಿ ಸಂಘದ ಶಾಖೆ ಉದ್ಘಾಟನೆ

ರಿಪ್ಪನ್‌ಪೇಟೆ ; ಇಲ್ಲಿನ ಬರುವೆ ಗ್ರಾಮದಲ್ಲಿ ಅಮೃತ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದವರು ಫೆಬ್ರವರಿ 17 ರಂದು ಸೋಮವಾರ 10 ಗಂಟೆ ರಿಪ್ಪನ್‌ಪೇಟೆಯಲ್ಲಿ  ಸೌಹಾರ್ದ ಸಹಕಾರಿ ಸಂಘದ ಶಾಖೆ ಉದ್ಘಾಟನೆ ನಡೆಯಲಿದೆ.

ಈ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಮೃತ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕಿರಣ ಜೆ.ಪಿ.ವಹಿಸುವರು.

ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ಉಪಾಧ್ಯಕ್ಷ ಎ.ಆರ್.ಪ್ರಸನ್ನಕುಮಾರ, ರಿಪ್ಪನ್‌ಪೇಟೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪರಮೇಶ್, ಸಾಗರ ಲೆಕ್ಕಪರಿಶೋಧನಕ ಬಿ.ವಿ.ರವೀಂದ್ರನಾಥ, ಅಮೃತ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಡಿ.ಸೋಮಶೇಖರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಹಕಾರ ಸಂಘದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment