Shivamogga

ತಂದೆ ಸಾವಿನ ನೋವಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ !

ಶಿವಮೊಗ್ಗ ; ವಿದ್ಯಾರ್ಥಿಯೋರ್ವ ತಂದೆ ಸಾವಿನ ದುಃಖದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ನಡೆದಿರುವುದು ಶಿವಮೊಗ್ಗದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೌದು, ಇಂದು ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಇತ್ತು. ಈ ನಡುವೆ ಶಿವಮೊಗ್ಗ ತಾಲ್ಲೂಕಿನ ಮಂಡಘಟ್ಟ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಂ ತನ್ನ ತಂದೆಯ ಸಾವಿನ ನೋವಿನಲ್ಲೇ ಇಂದು ಪರೀಕ್ಷೆ ಬರೆದಿದ್ದಾನೆ.

ನಿನ್ನೆ ಪ್ರೀತಂ ತಂದೆ ಮಂಜುನಾಥ್ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪ್ರೀತಂ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೈರಾಗಿದ್ದನು. ವಿಷಯ ತಿಳಿದ ಬಿಇಒ ರಮೇಶ್ ಅವರು ವಿದ್ಯಾರ್ಥಿ ಪ್ರೀತಂ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ. ನಂತರ ವಿದ್ಯಾರ್ಥಿ ಪ್ರೀತಂನನ್ನ ತಮ್ಮ ಜೀಪ್ ನಲ್ಲೇ ಆಯನೂರು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿದರು. ಈ ಮೂಲಕ ತಂದೆಯ ಸಾವಿನ ದುಃಖದಲ್ಲೂ ಪ್ರೀತಂ ಪರೀಕ್ಷೆ ಬರೆದಿದ್ದಾನೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>