
ಸಹಕಾರ ವಲಯದಲ್ಲೂ ಸೂಪರ್ ಮಾರ್ಕೆಟ್, ಮಾಲ್ ಆರಂಭಿಸಲು ಅವಕಾಶವಿದೆ : ಸಂಸದ ಬಿ.ವೈ. ರಾಘವೇಂದ್ರ
ಸಹಕಾರ ಸಂಘಗಳು ಕೇವಲ ಸಾಲ ನೀಡುವ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ, ಸೂಪರ್ ಮಾರ್ಕೆಟ್, ಮಾಲ್ ಹಾಗೂ ಹಾಲಿನ ಮಾರಾಟ ಕೇಂದ್ರಗಳಂತಹ ವಾಣಿಜ್ಯ ಸಂಸ್ಥೆಗಳನ್ನು ಸಹ ನಡೆಸಲು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.









