
31 ಸಾವಿರ ಎಕರೆ ಅರಣ್ಯ ಜಮೀನು ಹಕ್ಕು ರದ್ದಾಗುವ ಸಾಧ್ಯತೆ? ಹೈಕೋರ್ಟ್‌ನಲ್ಲಿ ಮತ್ತೆ ಶುರುವಾಯ್ತು ಕಾನೂನು ಹೋರಾಟ ; ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ರೈತರು
ಅಧಿಸೂಚಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯಿಂದ ಜಮೀನು ಮಂಜೂರು ಪಡೆದುಕೊಂಡಿದ್ದ ರೈತರು ಇದೀಗ ತಮ್ಮ ಭೂಮಿಯ ಹಕ್ಕನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಜಮೀನುಗಳನ್ನು ಮರಳಿ ಅರಣ್ಯ ಇಲಾಖೆಯ ಸುಪರ್ದಿಗೆ ತಂದು, ಪಹಣಿ (ಆರ್‌ಟಿಸಿ) ಮತ್ತು ಮ್ಯುಟೇಷನ್ ದಾಖಲೆಗಳಲ್ಲಿ ಅರಣ್ಯ ಪ್ರದೇಶವೆಂದು ನಮೂದಿಸಲು ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ತೀವ್ರಗೊಂಡಿದೆ.









